ಬಾಗಲಕೋಟೆ: ಕಲರ್ಸ್ ಕನ್ನಡ ಟಿವಿಯಲ್ಲಿ ಬರುವ ಭಾಗ್ಯಲಕ್ಷ್ಮೀ ಸೀರಿಯಲ್ ಪ್ರಭಾವದಿಂದ ಇಲ್ಲಿನ ಗೃಹಣಿಯೊಬ್ಬರು ಎಸ್ಸೆಸ್ಸೆಲ್ಸಿ ಪಾಸಾದ ೨೫ ವರ್ಷಗಳ ನಂತರ ಪಿಯುಸಿ ಪರೀಕ್ಷೆಗೆ ಕುಳಿತು ಪಾಸಾಗಿದ್ದಾರೆ. ಇಲ್ಲಿನ ಯೋಗ ಶಿಕ್ಷಕಿ ಅಂಬಿಕಾ ಚವ್ಹಾಣ(ತವರುಮನೆ ಹೆಸರು ಅಂಬಾಬಾಯಿ ಪವಾರ) ಈ ವರ್ಷದ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಎದುರಿಸಿ ೨೮೫ ಅಂಕ ಗಳಿಸಿ ಪಾಸಾಗಿದ್ದಾರೆ.