Home ತಾಜಾ ಸುದ್ದಿ ಸಿಡಿಲು ಬಡಿದು ಓರ್ವ ಸಾವು: ಇಬ್ಬರು ಗಂಭೀರ

ಸಿಡಿಲು ಬಡಿದು ಓರ್ವ ಸಾವು: ಇಬ್ಬರು ಗಂಭೀರ

0

ಮಂಗಳೂರು: ಸಿಡಿಲು ಬಡಿದು ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಡಬ ತಾಲೂಕಿನ ಇಚಿಲಂಪಾಡಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಇಚಿಲಂಪಾಡಿಯ ಕುರಿಯಾಳ ಕೊಪ್ಪ ಎಂಬಲ್ಲಿ ಮರಳು ತೆಗೆದು ಶೆಡ್‌ನಲ್ಲಿ ಮೂವರು ಕುಳಿತಿದ್ದ ವೇಳೆ ಸಿಡಿಲು ಬಡಿದಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Exit mobile version