Home ಅಪರಾಧ ಸಾರಾಯಿ ಕೊಡಿಸದಿದ್ದಕ್ಕೆ ಬಾಟಲಿಯಿಂದ ಹಲ್ಲೆ

ಸಾರಾಯಿ ಕೊಡಿಸದಿದ್ದಕ್ಕೆ ಬಾಟಲಿಯಿಂದ ಹಲ್ಲೆ

0

ಹುಬ್ಬಳ್ಳಿ: ಕ್ವಾಟರ್ ಸಾರಾಯಿ ಕೊಡಿಸು ಎಂದಿದಕ್ಕೆ ಸಿಟ್ಟಾಗಿ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯ ಬಿ. ಎಂಬಾತನ ವಿರುದ್ಧ ಆನಂದ ಸಿ. ಎಂಬಾತ ಪ್ರಕರಣ ದಾಖಲಿಸಿದ್ದಾನೆ. ಆನಂದ ಬ್ಯಾಳಿ ಪ್ಲಾಟ್ ಹತ್ತಿರ ವಿಜಯನಿಗೆ ಕ್ವಾಟರ್ ಸಾರಾಯಿ ಕೊಡಿಸುವಂತೆ ಕೇಳಿದ್ದು, ಇದರಿಂದ ಸಿಟ್ಟಾದ ವಿಜಯ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version