Home News ಸಹೋದರರ ಮೇಲೆ 12 ಜನರಿಂದ ಮಾರಣಾಂತಿಕ ಹಲ್ಲೆ

ಸಹೋದರರ ಮೇಲೆ 12 ಜನರಿಂದ ಮಾರಣಾಂತಿಕ ಹಲ್ಲೆ

ಬೆಳಗಾವಿ: ಚಿಕನ್ ಸೆಂಟರ್ ನಡೆಸುತ್ತಿದ್ದ ಇಬ್ಬರು ಸಹೋದರ ಮೇಲೆ ಶುಕ್ರವಾರ ಹಾಡಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿರುವ ಘಟನೆ ಜಿಲ್ಲೆಯ ಚನ್ನಮ್ಮನ ಕಿತ್ತೂರಿನ ಗುರುವಾರ ಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆ ಬಳಿ ಇರುವ ಡೈಮಂಡ್ ಚಿಕನ್ ಸೆಂಟರ್‌ನಲ್ಲಿ ನಡೆದಿದೆ.
ಮುಜಮ್ಮಿಲ ಇನ್ನಾ ಜಮಾದಾರ(೩೩), ತೌಸೀಫ್ ಇನ್ನಾ ಜಮಾದಾರ(೩೬) ಹಲ್ಲೆಗೊಳಗಾದ ಸಹೋದರರು. ಇವರಲ್ಲಿ ಮುಜಮ್ಮಿಲ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗಂಭೀರವಾಗಿ ಗಾಯಗೊಂಡಿರುವ ಮುಜಮ್ಮಿಲ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇಬ್ಬರ ನಡುವಿನ ಹಣಕಾಸಿನ ವ್ಯವಹಾರವೇ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಕ್ರೂಸರ್ ವಾಹನದಲ್ಲಿ ಸುಮಾರು ಹನ್ನೆರಡು ಜನರಿದ್ದ ತಂಡವು ಅಂಗಡಿಯೊಳಗೆ ಬೆಳಗ್ಗೆ ನುಗ್ಗಿತು. ಅಂಗಡಿಯಲ್ಲಿದ್ದ ಒಬ್ಬನನ್ನು ಎಳೆದುಕೊಂಡು ಹೊರಗೆ ಬಂದು ಮಚ್ಚಿನಿಂದ ಹಲ್ಲೆ ಮಾಡಿತು. ಉಳಿದವರು ಮತ್ತೊಬ್ಬನ ಮೇಲೆ ಹಲ್ಲೆ ಮಾಡಲು ಅಂಗಡಿಗೆ ನುಗ್ಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

Exit mobile version