Home ತಾಜಾ ಸುದ್ದಿ ಸರ್ಕಾರಿ ಆಸ್ತಿ ಕಬಳಿಕೆ: ಮುಲಾಜಿಲ್ಲದೆ ಕಠಿಣ ಕ್ರಮ

ಸರ್ಕಾರಿ ಆಸ್ತಿ ಕಬಳಿಕೆ: ಮುಲಾಜಿಲ್ಲದೆ ಕಠಿಣ ಕ್ರಮ

0

ಬೆಳಗಾವಿ: ಬಿಡಿಎಗೆ ಸೇರಿದ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ವಿಧಾನ ಸಭಾ ಅಧಿವೇಶನದಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಆಸ್ತಿ ಕಬಳಿಕೆಯಾಗುತ್ತಿರುವ ಕುರಿತು ಶಾಸಕರಾದ ಮುನಿರತ್ನ ಕೇಳಿದ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿರುವ ಅವರು. ಸರ್ಕಾರಿ ಆಸ್ತಿ ಕಬಳಿಕೆ ತಡೆಯಲು ನಮ್ಮ ಸರ್ಕಾರ ಬದ್ಧವಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಮ್ಯಾಪಿಂಗ್‌ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಿಬಿಎಂಪಿ, ಬಿಡಿಎಗೆ ಸೇರಿದ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಆಸ್ತಿಯನ್ನು ಉಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬಳಸಲಾಗುವುದು ಎಂದಿದ್ದಾರೆ.

Exit mobile version