Home ತಾಜಾ ಸುದ್ದಿ ಸರ್ಕಾರದ ನಡೆಯಿಂದ ಬೇಸರ: ಅನ್ನದಾತ ದೀಪಾವಳಿ ಆಚರಿಸೋದಿಲ್ಲ

ಸರ್ಕಾರದ ನಡೆಯಿಂದ ಬೇಸರ: ಅನ್ನದಾತ ದೀಪಾವಳಿ ಆಚರಿಸೋದಿಲ್ಲ

0

ಬೆಂಗಳೂರು: ಮಂಡ್ಯಮ್ ಐಯಂಗಾರ್‌ಗಳು ದೀಪಾವಳಿ ಆಚರಣೆ ಮಾಡೋದಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಭಾರತವನ್ನು ಇಸ್ಲಾಮೀಕರಣ ಮಾಡುವ ಏಕೈಕ ಉದ್ದೇಶ ಹೊಂದಿದ್ದ ಟಿಪ್ಪು ಸುಲ್ತಾನ್ ದೀಪಾವಳಿ ಸಮಯದಲ್ಲಿ ಮಂಡ್ಯ ಜಿಲ್ಲೆಯ ಮಂಡ್ಯಮ್ ಐಯಂಗಾರ್ ಗಳು ಇದ್ದ ಗ್ರಾಮಕ್ಕೆ ಲಗ್ಗೆ ಇಟ್ಟು ಸಾವಿರಾರು ಜನರನ್ನು ಕೊಚ್ಚು ಹಾಕಿದ. ಟಿಪ್ಪುವಿನ ಕ್ರೌರ್ಯ ಎಷ್ಟರ ಮಟ್ಟಿಗೆ ಅವರ ಮೇಲೆ ಪ್ರಭಾವ ಬೀರಿದೆಯೆಂದರೆ ಇಂದಿಗೂ ಸಹ ಮಂಡ್ಯಮ್ ಐಯಂಗಾರ್‌ಗಳು ದೀಪಾವಳಿ ಆಚರಣೆ ಮಾಡೋದಿಲ್ಲ. ಈಗ, ಸಿದ್ದರಾಮಯ್ಯನವರ ಆಡಳಿತದಲ್ಲೂ ಸಹ ವಕ್ಫ್ ಕಾನೂನನ್ನು ಹೇರಿ ರೈತರ ಜಾಮೀನು ನಮ್ಮದೆಂದು ಹೇಳುತ್ತಿರುವ ಸರ್ಕಾರದ ನಡೆಯಿಂದ ಬೇಸತ್ತಿರುವ ಅನ್ನದಾತನು ದೀಪಾವಳಿ ಆಚರಿಸೋದಿಲ್ಲ ಎಂದು ಹೇಳಿದ್ದಾರೆ. ಅನ್ನದಾತನ ಅಳಲು ಸರ್ಕಾರಕ್ಕೆ ಕೇಳುತ್ತಿಲ್ಲವೇ. ಅನ್ನದಾತನ ಮೇಲೆ ಏನಾದರೂ ಬಲವಂತದ ಕ್ರಮವೆಸಗಿದರೆ ರಾಜ್ಯಾದ್ಯಂತ ಹೋರಾಟ ಆಗುವುದು ನಿಶ್ಚಿತ. ಅಲ್ಲದೆ, ವಕ್ಫ್ ಮಂಡಳಿ ತನ್ನ ಪೌರುಷವನ್ನು ರೈತರ ಮೇಲೆ ತೋರಿಸಿದ್ದಲ್ಲಿ ರಾಜ್ಯಾದ್ಯಂತ ಇರುವ ವಕ್ಫ್ ಕಚೇರಿಗಳಿಗೆ ಬೀಗ ಹಾಕುವ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ತುಷ್ಟೀಕರಣ ರಾಜಕೀಯದ ಪ್ರಯೋಗವನ್ನು ಅನ್ನದಾತನ ಮೇಲೆ ಮಾಡಬೇಡಿ. ಜೈ ಜವಾನ್, ಜೈ ಕಿಸಾನ್, ಜೈ ಸಂವಿಧಾನ್ ಎಂದಿದ್ದಾರೆ.

Exit mobile version