Home ನಮ್ಮ ಜಿಲ್ಲೆ ಸರ್ಕಾರಕ್ಕೆ ‘ಸವಾಲಲ್ಲ’ ಬದಲಿಗೆ ನಿಮ್ಮ ಸರ್ಕಾರದ ಅಸಮರ್ಥತೆ

ಸರ್ಕಾರಕ್ಕೆ ‘ಸವಾಲಲ್ಲ’ ಬದಲಿಗೆ ನಿಮ್ಮ ಸರ್ಕಾರದ ಅಸಮರ್ಥತೆ

0

ಬೆಂಗಳೂರು: ಎದೆಯುಬ್ಬಿಸಿ ಹೇಳಿದ ಎದೆಗಾರಿಕೆ, ಸಾಹಸಪ್ರವೃತ್ತಿ ಅಕ್ಕಿ ಖರೀದಿಯಲ್ಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ಇದು ಸರ್ಕಾರಕ್ಕೆ ‘ಸವಾಲಲ್ಲ’ ಬದಲಿಗೆ ನಿಮ್ಮ ಸರ್ಕಾರದ ಅಸಮರ್ಥತೆ, ಅದಕ್ಷತೆ ಅಷ್ಟೇ. ಬಡಪಾಯಿಗಳ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ, ಬಜರಂಗ ದಳದ ಕಾರ್ಯಕರ್ತರ ಮೇಲೆ, ದತ್ತ ಮಾಲೆ ಹಾಕಿದವರ ಮೇಲೆ ಕೇಸ್ ಹಾಕಿಸಿ ಅಂದರ್ ಮಾಡುವ ಉತ್ಸಾಹ, ಅಕ್ಕಿ ಖರೀದಿಯಲ್ಲಿಲ್ಲ. ಅಲ್ಪ ಸಂಖ್ಯಾತರಿಗೆ 10000 ಕೋಟಿ ಕೊಡುತ್ತೇನೆ ಎಂದು ಎದೆಯುಬ್ಬಿಸಿ ಹೇಳಿದ ಎದೆಗಾರಿಕೆ, ಸಾಹಸಪ್ರವೃತ್ತಿ ಅಕ್ಕಿ ಖರೀದಿಯಲ್ಲಿಲ್ಲ” ಎಂದು ಬರೆದುಕೊಂಡಿದ್ದಾರೆ.

Exit mobile version