Home ಅಪರಾಧ ಸರಣಿ ಅಪಘಾತ: ಹರಿಹರಪುರ ಸ್ವಾಮೀಜಿ ಪಾರು

ಸರಣಿ ಅಪಘಾತ: ಹರಿಹರಪುರ ಸ್ವಾಮೀಜಿ ಪಾರು

0

ಶಿವಮೊಗ್ಗ: ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಮಠದ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಕೋಟೆಗದ್ದೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಹಸುವೊಂದು ದಿಢೀರ್ ರಸ್ತೆಗೆ ಬಂದಿದ್ದರಿಂದ ಎಸ್ಕಾರ್ಟ್ ವಾಹನ ಬ್ರೇಕ್ ಹಾಕಿದೆ. ಹಿಂಬದಿಯಲ್ಲಿದ್ದ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕಾರು ಎಸ್ಕಾರ್ಟ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿ ಬರುತ್ತಿದ್ದ ಮಠದ ಮತ್ತೊಂದು ಕಾರು ಸ್ವಾಮೀಜಿ ಇದ್ದ ಕಾರಿಗೆ ಅಪ್ಪಳಿಸಿದೆ. ಮೂರೂ ವಾಹನಗಳು ಜಖಂ ಆಗಿವೆ.
ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಚಿಕ್ಕಮಗಳೂರಿನಿಂದ ಶಿರಸಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಶ್ರೀಗಳು ಮತ್ತು ಕಾರಿನಲ್ಲಿದ್ದ ಉಳಿದವರು ಜೀವಾಪಾಯದಿಂದ ಪಾರಾಗಿದ್ದಾರೆ. ನಂತರ ಶ್ರೀಗಳು ಬದಲಿ ಕಾರಿನಲ್ಲಿ ಪ್ರಯಾಣ ಮುಂದುವರೆಸಿದರು ಎಂದು ಮೂಲಗಳು ತಿಳಿಸಿವೆ.

Exit mobile version