Home ನಮ್ಮ ಜಿಲ್ಲೆ ಕಲಬುರಗಿ ಸದ್ಗುರು ಶಾಂತಾನಂದ ಸರಸ್ವತೀ ಸ್ವಾಮಿಗಳವರ 91ನೇ ಆರಾಧನಾ ಮಹೋತ್ಸವ

ಸದ್ಗುರು ಶಾಂತಾನಂದ ಸರಸ್ವತೀ ಸ್ವಾಮಿಗಳವರ 91ನೇ ಆರಾಧನಾ ಮಹೋತ್ಸವ

0

ಕೆಂಭಾವಿ: ಹುಣಸಗಿ ತಾಲೂಕಿನ ಸುಕ್ಷೇತ್ರ ಕೂಡಲಗಿ ಗ್ರಾಮದಲ್ಲಿ ಸದ್ಗುರು ಶಾಂತಾನಂದ ಸರಸ್ವತೀ ಸ್ವಾಮಿಗಳವರ 91ನೇ ಆರಾಧನಾ ಮಹೋತ್ಸವ ನಿಮಿತ್ತ ಲೋಕಕಲ್ಯಾಣಾರ್ಥವಾಗಿ, ಅಷ್ಟದ್ರವ್ಯಗಳ ಮೂಲಕ ಕ್ಷಿಪ್ರ ಗಣಪತಿ ಹವನ ಸಂಕಷ್ಟ ಚತುರ್ಥಿ ನಿಮಿತ್ತ ಶ್ರೀ ಸ್ವಯಂಭೂ ಸಿದ್ಧಿವಿನಾಯಕನಿಗೆ ಪೂಜಾ ಅಭಿಷೇಕ ನೆರವೇರಿತು.
ಸೋಮವಾರ ಮಧ್ಯಾರಾಧನೆಯ ನಿಮಿತ್ತ ಸದ್ಗುರುಗಳಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಮಹಾ ಮೃತ್ಯುಂಜಯ ಹವನ ಕುಮಾರಿಕಾ ಪೂಜೆ, ಅನ್ನಪೂರ್ಣ ಪೂಜೆ ಹಾಗೂ ಗುರು ಪಾದಪೂಜೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ಜರುಗಲಿದೆ.
ಮಂಗಳವಾರ ಭಜನೆ, ಕೀರ್ತನೆ, ಸಂಗೀತಸೇವಾ ಗೋಪಾಲಕಾವಲ, ಅವಭೃತಸ್ನಾನ ಪೂಜಾ, ಅಭಿಷೇಕ ಮಹಾಪ್ರಸಾದದೊಂದಿಗ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕಲ ಸದ್ಭಕ್ತರು ಆಗಮಿಸಿ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪೀಠಾಧಿಪತಿಗಳಾದ ಉಮಾಕಾಂತ ಸಿದ್ಧರಾಜ ಬಾಬಾಮಹಾರಾಜರು ತಿಳಿಸಿದ್ದಾರೆ.

Exit mobile version