Home ತಾಜಾ ಸುದ್ದಿ ಸಚಿವ ಜಮೀರ್ ಅಹಮದ್‌ರನ್ನು ಕಾಂಗ್ರೆಸ್ ಕಿತ್ತೊಗೆಯಲಿ

ಸಚಿವ ಜಮೀರ್ ಅಹಮದ್‌ರನ್ನು ಕಾಂಗ್ರೆಸ್ ಕಿತ್ತೊಗೆಯಲಿ

0

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಮೊದಲು ಜಮೀರ್ ಅಹ್ಮದ್ ಅವರರನ್ನ ಕಿತ್ತೊಗೆಯಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಕ್ಫ್ ಭೂ ಕಬಳಿಕೆಯಲ್ಲಿ ಜಮೀರ್ ಅಹ್ಮದ್ ಸಂಚಿದೆ. ಕಾಂಗ್ರೆಸ್ ಪಾರ್ಟಿಗೆ ಮಾನ ಮರ್ಯಾದೆ ಇದ್ರೆ ತಕ್ಷಣ ಅವರನ್ನು ಪಕ್ಷದಿಂದಲೇ ಕಿತ್ತೊಗೆಯಲಿ ಎಂದು ಆಗ್ರಹಿಸಿದರು.

ಸಚಿವ ಜಮೀರ್ ಅಹ್ಮದ್ ಈ ರಾಜ್ಯ ಮತ್ತು ದೇಶವನ್ನು ಇಸ್ಲಾಂಮೀಕರಣ ಮಾಡಲು ನಿಂತಿದ್ದು, ಎಲ್ಲೆಡೆ ಕೋಮು – ದ್ವೇಷ ಹರಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತಾಂಧತೆಯಲ್ಲಿ ತೇಲಾಡುತ್ತಿರುವ ಜಮೀರ್ ಅಹ್ಮದ್ ರನ್ನು ಕಾಂಗ್ರೆಸ್ ಪಾರ್ಟಿ ಮೊದಲು ಕಿತ್ತಿಗೆಯಲೇಬೇಕು ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು.

Exit mobile version