ಸೌಕರ್ಯ ಕೊರತೆ; ಪ್ರಕರಣ ದಾಖಲಿಸಲು ಸೂಚನೆ
ದಾವಣಗೆರೆ: ಉಪಲೋಕಾಯುಕ್ತ ಬಿ.ವೀರಪ್ಪ ಲೋಕಿಕೆರೆ ರಸ್ತೆಯಲ್ಲಿರುವ ಶ್ರೀರಾಮನಗರದ ಮಹಿಳಾ ನಿಲಯಕ್ಕೆ ಮಂಗಳವಾರ ರಾತ್ರಿ ದಿಢೀರ್ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಸೌಕರ್ಯ ಕೊರತೆ ಕಂಡು ಬಂದಿದ್ದು, ಲೋಕಾಯುಕ್ತ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.
ಮಹಿಳಾ ನಿಲಯದಲ್ಲಿ ೫೪ ಮಹಿಳೆಯರಿದ್ದಾರೆ. ಇಲ್ಲಿನ ಸೌಲಭ್ಯಗಳ ಜೊತೆಗೆ ಪ್ರೀತಿಯನ್ನು ತೋರಿಸುವುದು ಮುಖ್ಯವಾಗಿರುತ್ತದೆ. ವೈದ್ಯರು ಕೆಲವು ದಿನ ಹಾಜರಿರುವುದಿಲ್ಲ. ನೊಟೀಸ್ ನೀಡಲು ಉಪಲೋಕಾಯುಕ್ತರು ತಿಳಿಸಿ ಗುಣಮಟ್ಟದ ಆಹಾರ ನೀಡಲು ತಾಕೀತು ಮಾಡಿದರು.
ಮಹಿಳಾ ನಿಲಯದಲ್ಲಿ ಮೂಲಭೂತ ಸೌಕರ್ಯ ಕೊರತೆ ಇದ್ದು, ಲೋಕಾಯುಕ್ತ ಪ್ರಕರಣ ದಾಖಲಿಸುವುದಾಗಿ ತಿಳಿಸಿದ ಉಪಲೋಕಾಯುಕ್ತರು, ಇನ್ನು ಸಾಕಷ್ಟು ಸುಧಾರಣೆ ಆಗಬೇಕಾಗಿದೆ ಎಂದು ಸೂಚಿಸಿದರು.
ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ:
ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ ಪರಿಶೀಲನೆ ನಡೆಸಿದರು. ನಿಲಯದಲ್ಲಿ ೫೩ ಮಕ್ಕಳು ಇದ್ದರು. ಮಕ್ಕಳು ಇಲ್ಲಿಂದ ಶಾಲೆಗೆ ಹೋಗಲು ವಾಹನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಕೆಲವು ಮಹಿಳೆಯರು ವಾಪಸ್ ಹೋಗಲು ಮನವಿ ಮಾಡಿದಾಗ ಅವರ ಸಂಬಂಧಿಕರೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಇಬ್ಬರು ಮಹಿಳೆಯರಿಗೆ ನೂತನ ವರನನ್ನು ನೋಡಿದ್ದು ಆದಷ್ಟು ಬೇಗ ನಿಯಮಾನುಸಾರ ಎಲ್ಲರೂ ನಿಂತು ಮದುವೆ ಮಾಡಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಸಿ ಉಪಲೋಕಾಯುಕ್ತ ಬಿ.ವೀರಪ್ಪ ಆಹಾರ ದಾಸ್ತಾನು ಕೊಠಡಿ ಪರಿಶೀಲನೆ ನಡೆಸಿದಾಗ, ಗೋಧಿಯಲ್ಲಿ ಹುಳು ಇದೆ, ಇದನ್ನು ನೋಡಿಕೊಂಡು ಸರಬರಾಜು ಮಾಡಿದಾಗ ತಿರಸ್ಕರಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಲೋಕಾಯುಕ್ತ ಅಪರ ನಿಬಂಧಕರಾದ ರಾಜಶೇಖರ್, ಎನ್.ವಿ. ಅರವಿಂದ್, ಮಿಲನ, ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾರಿದ್ದರು.