ಚಿಕ್ಕಮಗಳೂರು: ಒತ್ತುವರಿ ತೆರವು ಸೇರಿದಂತೆ ರೈತ ವಿರೋಧಿ ಧೋರಣೆ ಖಂಡಿಸಿ ಶನಿವಾರ ಶೃಂಗೇರಿ ವಿಧಾನಸಭಾ ವ್ಯಾಪ್ತಿಯ ಮೂರು ತಾಲ್ಲೂಕುಗಳಾದ ಕೋಪ್ಪ, ಎನ್.ಆರ್.ಪರ ತಾಲೂಕುಗಳಲ್ಲಿ ಶನಿವಾರ ಬಂದ್ ನಡೆಸಲಾಗುತ್ತಿದೆ.

ಶೃಂಗೇರಿ, ಎನ್.ಆರ್.ಪುರ, ಕೊಪ್ಪ ತಾಲೂಕಿನಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆಯಿಂದ ಬಂದ್ ಗೆ ಕರೆ ನೀಡಲಾಗಿದೆ. ಸರ್ಕಾರದ ವಿರುದ್ದ ಮಲೆನಾಡಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬಂದ್ ಗೆ ಕರೆ ನೀಡಿವೆ.
ಸರ್ಕಾರದ ವಿರುದ್ದ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ, ಅರಣ್ಯ, ಕಂದಾಯ ಭೂಮಿ ಒತ್ತುವರಿ ತೆರವು ಪ್ರಕರಣವನ್ನು ಖಂಡಿಸಿ ಬಂದ್ ಮಾಡಲಾಗಿದೆ. ಕೊಪ್ಪದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಿದೆ.