Home ತಾಜಾ ಸುದ್ದಿ ಶಿಗ್ಗಾವಿಗೆ ನೂರು ಕೋಟಿ ಅನುದಾನ ಬಿಡುಗಡೆಯ ದಾಖಲೆ ನೀಡಲಿ

ಶಿಗ್ಗಾವಿಗೆ ನೂರು ಕೋಟಿ ಅನುದಾನ ಬಿಡುಗಡೆಯ ದಾಖಲೆ ನೀಡಲಿ

0

ಹಾವೇರಿ(ಶಿಗ್ಗಾವಿ): ರಾಜ್ಯ ಕಾಂಗ್ರೆಸ್ ಸರ್ಕಾರ ಶಿಗ್ಗಾವಿಗೆ ನೂರು ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ ಎಂದು ಹಸಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದೆ. ನೂರು ಕೋಟಿ ರೂ. ಬಿಡುಗಡೆ ಮಾಡಿರುವ ದಾಖಲೆ ಇದ್ದರೆ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಶಿಗ್ಗಾವಿ ತಾಲೂಕಿನ ಹೋತನಹಳ್ಳಿ, ಚಂದಾಪುರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಸಣ್ಣ ಪುಟ್ಟ ವಿಷಯಗಳಿಗೂ ಜನರ ಮೇಲೆ ಕೇಸ್ ಹಾಕಿ ಪೊಲಿಸ್ ಸ್ಟೇಷನ್‌ಗೆ ಅಲೆದಾಡುವಂತೆ ಮಾಡುತ್ತಿದ್ದಾರೆ. ಪಿಎಸ್‌ಐಗಳು ಕೊಬ್ಬಿದ್ದಾರೆ. ದಬ್ಬಾಳಿಕೆ ಮಾಡುವ ಸರ್ಕಾರದ ವಿರುದ್ಧ ಎಲ್ಲರೂ ನಿಲ್ಲಬೇಕು. ನಾನು ಸದಾ ನಿಮ್ಮ ಜೊತೆಗೆ ಇರುತ್ತೇನೆ. ನಿಮ್ಮ ಕೂದಲಿಗೆ ಕೊಂಕಾಗದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಶಿಗ್ಗಾವಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಗಲಭೆಗಳು ಆಗಿರಲಿಲ್ಲ. ನಮ್ಮ ನಮ್ಮ ನಡುವೆಯೇ ಮಾತುಕತೆ ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಂಡು ಬರುತ್ತಿದ್ದೇವು. ಈಗ ಪ್ರತಿಯೊಂದಕ್ಕೂ ಪೊಲೀಸ್ ಸ್ಟೇಷನ್‌ಗೆ ಹೋಗಬೇಕು. ಅಲ್ಲಿ ಇಬ್ಬರೂ ದುಡ್ಡು ಕಳೆದುಕೊಳ್ಳುವಂತಾಗಿದೆ‌. ಈ ಕ್ಷೇತ್ರದಲ್ಲಿ ಗುಂಡಾ ಸಂಸ್ಕೃತಿ ಪೊಲೀಸ್ ಸ್ಟೇಷನ್ ರಾಜಕೀಯಕ್ಕೆ ಅವಕಾಶ ನೀಡದೇ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಿಕೊಂಡು ಬರಬೇಕು ಎಂದರು.

Exit mobile version