Home ಅಪರಾಧ ಶಾಲೆಗಳಿಗೆ ಬಾಂಬ್ ಬೆದರಿಕೆ

ಶಾಲೆಗಳಿಗೆ ಬಾಂಬ್ ಬೆದರಿಕೆ

0

ಅಹಮದಾಬಾದ್: ಗುಜರಾತ್‌ನ ಶಾಲೆಗಳಿಗೆ ಇಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎನ್ನಲಾಗಿದೆ.
ಈ ಇಮೇಲ್ ನಂತರ ಪೊಲೀಸರು ಅಲರ್ಟ್ ಆಗಿದ್ದು, ಶಾಲೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಪೊಲೀಸ್ ತಂಡಕ್ಕೆ ಯಾವುದೇ ಆಕ್ಷೇಪಾರ್ಹ ವಸ್ತು ಪತ್ತೆಯಾಗಿಲ್ಲ. ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ. ರಷ್ಯಾ ಮೂಲದ ಹ್ಯಾಂಡ್ಲರ್‌ನಿಂದ ಇಮೇಲ್‌ಗಳನ್ನು ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ಸುಮಾರು 100ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್​ ಬೆದರಿಕೆ ಸಂದೇಶ ಇ-ಮೇಲ್ ಮೂಲಕ ಬಂದಿತ್ತು.

Exit mobile version