Home News ಶಾಲಾ ಕ್ರೀಡಾಕೂಟದಲ್ಲಿ ವಿದ್ಯುತ್ ಅವಘಡ: ಓರ್ವ ಸಾವು, ವಿದ್ಯಾರ್ಥಿ ಗಂಭೀರ

ಶಾಲಾ ಕ್ರೀಡಾಕೂಟದಲ್ಲಿ ವಿದ್ಯುತ್ ಅವಘಡ: ಓರ್ವ ಸಾವು, ವಿದ್ಯಾರ್ಥಿ ಗಂಭೀರ

ಚಿಕ್ಕಬಳ್ಳಾಪುರ: ಗೌರಿಬಿದನೂರಿನ ತಾಲೂಕಿನ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪೋಷಕರೊಬ್ಬರು ಕರೆಂಟ್‌ ಶಾಕ್‌ನಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಶಾಲೆಯೊಂದರಲ್ಲಿ ಪೋಷಕರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇದಕ್ಕಾಗಿ ಶಾಲಾ ಆವರಣದಲ್ಲಿ ದೊಡ್ಡದಾಗಿ ಪೆಂಡಾಲ್‌ ಹಾಕಲಾಗಿತ್ತು. ಈ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ಪೆಂಡಾಲ್‌ ಹಾರಿ ಹೈಟೆನ್ಷನ್‌ ತಂತಿಗೆ ತಗುಲಿದೆ.ಇದರಿಂದ ಪೆಂಡಲ್ ಕೆಳಗೆ ಇದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯುತ್ ಪಸರಿಸಿದ್ದು, ವಿದ್ಯುತ್ ಅವಘಡದಲ್ಲಿ ಪೋಷಕ ರಾಘವೇಂದ್ರ ಸ್ಥಳದಲ್ಲೇ ಮೃತಪಟ್ಟರೆ, ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗ ದಾಖಲು ಮಾಡಲಾಗಿದೆ.

Exit mobile version