Home ತಾಜಾ ಸುದ್ದಿ ಶಾಂತಿದೂತರಾಗಲು ಹೊರಟ ತಾವು, ರಾಜ್ಯದಲ್ಲಿ ಏಕೆ ಅದನ್ನು ಅನುಸರಿಸುತ್ತಿಲ್ಲ?

ಶಾಂತಿದೂತರಾಗಲು ಹೊರಟ ತಾವು, ರಾಜ್ಯದಲ್ಲಿ ಏಕೆ ಅದನ್ನು ಅನುಸರಿಸುತ್ತಿಲ್ಲ?

0

ಬೆಂಗಳೂರು: ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಅವರ ಭೀಕರ ಕೊಲೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ ರಾಜ್ಯ ಆಡಳಿತದಲ್ಲಿ ಶಾಂತಿ ಸುವ್ಯವಸ್ಥೆ ಅನ್ನೋದು ಸಂಪೂರ್ಣ ನೆಲಕಚ್ಚಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ರಾಜ್ಯದಲ್ಲಿ ತುಷ್ಟೀಕರಣ ಸರ್ಕಾರದಿಂದಾಗಿ ಕಾನೂನು ಸುವ್ಯವಸ್ಥೆ ನಶಿಸುತ್ತಿದೆ. ಮತಾಂಧರಿಂದ ಹಿಂದೂಗಳ ಹತ್ಯೆ, ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಎಲ್ಲೆ ಮೀರಿದೆ. ಹಿಂದೂಗಳು ರಕ್ಷಣೆ ಪಡೆದು ಓಡಾಡುವಂತಹ ವಿಷಮ ಪರಿಸ್ಥಿತಿ ಎದುರಾಗಿದೆ.
ನಿನ್ನೆ ರಾತ್ರಿ ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಭಯಾನಕವಾಗಿದೆ. ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ.
ಸಿಎಂ ಸಿದ್ದರಾಮಯ್ಯ ಅವರೇ, ಭಯೋತ್ಪಾದನಾ ವಿಷಯದಲ್ಲಿ ಶಾಂತಿದೂತರಾಗಲು ಹೊರಟ ತಾವು, ರಾಜ್ಯದಲ್ಲಿ ಏಕೆ ಅದನ್ನು ಅನುಸರಿಸುತ್ತಿಲ್ಲ? ತಮ್ಮ ಆಡಳಿತದಲ್ಲಿ ಶಾಂತಿ ಸುವ್ಯವಸ್ಥೆ ಅನ್ನೋದು ಸಂಪೂರ್ಣ ನೆಲಕಚ್ಚಿದೆ. ಜನಸಾಮಾನ್ಯರನ್ನು ರಕ್ಷಿಸಲು ಆಗದಿದ್ದರೆ ನಿಮ್ಮ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು? ಎಂದಿದ್ದಾರೆ.

Exit mobile version