Home ತಾಜಾ ಸುದ್ದಿ ವಿಶೇಷ ತಹಸೀಲ್ದಾರ ಕಚೇರಿ, ಉಪನೋಂದಣಿ ಕಚೇರಿ ಎಸ್ ಎಂ ಕೃಷ್ಣ ಕೊಡುಗೆ

ವಿಶೇಷ ತಹಸೀಲ್ದಾರ ಕಚೇರಿ, ಉಪನೋಂದಣಿ ಕಚೇರಿ ಎಸ್ ಎಂ ಕೃಷ್ಣ ಕೊಡುಗೆ

0

ಇಳಕಲ್ : ನಗರವನ್ನು ತಾಲೂಕಾ ಕೇಂದ್ರವನ್ನಾಗಿ ಮಾಡಬೇಕು ಎಂಬ ಹೋರಾಟ ನಡೆದಾಗ ಇಳಕಲ್ ಗೆ ವಿಶೇಷ ತಹಸೀಲ್ದಾರ ಮತ್ತು ಉಪನೊಂದಣಿ ಕಚೇರಿಗಳನ್ನು ಮಂಜೂರು ಮಾಡಿದ ಶ್ರೇಯಸ್ಸು ಮಾಜಿ ಮುಖ್ಯಮಂತ್ರಿ ದಿ ಎಸ್ ಎಂ ಕೃಷ್ಣ ಅವರಿಗೆ ಸಲ್ಲುತ್ತದೆ.
ಎಸ್ ಎಂ ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ತಾಲೂಕಿಗಾಗಿ ಹೋರಾಟ , ಸರದಿ ಸತ್ಯಾಗ್ರಹ ಕಂಠಿ ಸರ್ಕಲ್ ನಲ್ಲಿ ದೊಡ್ಡದಾಗಿ ನಡೆದಿತ್ತು.ಆಗ ಮಾಜಿ ಸಚಿವ ಎಸ್ ಆರ್ ಕಾಶಪ್ಪನವರ ನಗರದ ಸರ್ವ ಪಕ್ಷಗಳ ನಿಯೋಗವನ್ನು ಎಸ್ ಎಂ ಕೃಷ್ಣರ ಬಳಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು.
ನಿಯೋಗವನ್ನು ಭೇಟಿ ಮಾಡಿದ ಅವರು ಅದರಲ್ಲಿ ಇದ್ದ ಎಂಟು ವರ್ಷದ ಮಗು ನಬಿವಾಲೆ ಎನ್ನುವವನಿಗೆ ಮಗು ನಿನಗೂ ತಾಲೂಕು ಬೇಕಾ ಎಂದು ಕೇಳಿದ್ದರು.ನಂತರ ಅವರು ತಾಲೂಕು ಹೋರಾಟ ಮಾಡುತ್ತಿದ್ದ ಹತ್ತು ಊರುಗಳಲ್ಲಿ ವಿಶೇಷ ತಹಸೀಲ್ದಾರ ಮತ್ತು ಉಪನೊಂದಣಿ ಕಚೇರಿಗಳನ್ನು ಮಂಜೂರು ಮಾಡಿದ್ದರು ಅದರಲ್ಲಿ ಇಳಕಲ್ ಸಹ ಒಂದಾಗಿತ್ತು.
ತದನಂತರ ಮಾಜಿ ಸಚಿವ ಎಸ್ ಆರ್ ಕಾಶಪ್ಪನವರ ರಸ್ತೆ ಅಪಘಾತದಲ್ಲಿ ನಿಧನರಾದಾಗ ನಡೆದ ಹುನಗುಂದ ವಿಧಾನಸಭೆ ಮತಕ್ಷೇತ್ರದ ಉಪಚುನಾವಣೆಯಲ್ಲಿ ಗೌರಮ್ಮ ಕಾಶಪ್ಪನವರ ಅವರಿಗೆ ಟಿಕೇಟ್ ಕೊಟ್ಟು ಅವರ ಜಯಕ್ಕಾಗಿ ನಗರದಲ್ಲಿ ಹಲವಾರು ದಿನಗಳ ಕಾಲ ಬೀಡು ಬಿಟ್ಟು ಗೌರಮ್ಮನವರನ್ನು ಈ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯನ್ನಾಗಿ ಆಯ್ಕೆ ಮಾಡಿದ್ದು ಈಗ ಇತಿಹಾಸ.

Exit mobile version