Home ನಮ್ಮ ಜಿಲ್ಲೆ ಧಾರವಾಡ ವಿವೇಕಾನಂದ ಆಸ್ಪತ್ರೆಯಲ್ಲಿ ಸತತ ಐದನೇ ವರ್ಷ ರಕ್ತದಾನ ಶಿಬಿರ

ವಿವೇಕಾನಂದ ಆಸ್ಪತ್ರೆಯಲ್ಲಿ ಸತತ ಐದನೇ ವರ್ಷ ರಕ್ತದಾನ ಶಿಬಿರ

0

ಹುಬ್ಬಳ್ಳಿ: ಇಲ್ಲಿನ ವಿವೇಕಾನಂದ ಜನರಲ್ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವತಿಯಿಂದ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಗುರುವಾರ ಜರುಗಿತು.
ರಕ್ತದಾನ ಶಿಬಿರದಲ್ಲಿ 350ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸತತ ಐದನೇ ವರ್ಷ ರಕ್ತದಾನ ಶಿಬಿರ ಏರ್ಪಡಿಸುತ್ತಿದ್ದು, ಜನರಲ್ಲಿ ರಕ್ತದಾನದ ಮಹತ್ವ, ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಆಸ್ಪತ್ರೆಯ ಆರ್‌ಎಂಓ ಡಾ. ಚಂದ್ರಶೇಖರ, ಟ್ರಸ್ಟಿಗಳಾದ ಅಮೃತಲಾಲ್ ಜೈನ, ಈಶ್ವರಲಾಲ್ ಲದ್ದಡ, ಚೇರಮನ್ ಕಮಲ್ ಮೆಹ್ತಾ, ಅಧ್ಯಕ್ಷ ದೀಪಕ್ ಶಹಾ, ಉಪಾಧ್ಯಕ್ಷ ಕೇಶವ ದೇಸಾಯಿ, ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ, ಆಸ್ಪತ್ರೆಯ ಸಿಇಓ ರಾಹುಲ್ ಮುಂಗೇಕರ್, ಡಾ.ಎಸ್.ಎಸ್. ಸಂಗೊಳ್ಳಿ, ವಿನೋದ ಪಟವಾ, ಡಾ.ಮಂಜುಳಾ ಹುಗ್ಗಿ ಸೇರಿದಂತೆ ಇತರರು ಇದ್ದರು.

Exit mobile version