Home ತಾಜಾ ಸುದ್ದಿ ವಿದ್ಯುತ್ ತಗುಲಿ ಅಪ್ಪ-ಮಗ ಸಾವು…

ವಿದ್ಯುತ್ ತಗುಲಿ ಅಪ್ಪ-ಮಗ ಸಾವು…

0

ರಾಣೇಬೆನ್ನೂರು: ಜಮೀನಿನಲ್ಲಿ ಪಂಪಸೆಟ್ ದುರಸ್ತಿ ಮಾಡಲು ಹೋದಾಗ ವಿದ್ಯುತ್ ತಗುಲಿ ಅಪ್ಪ-ಮಗ ಸಾವನ್ನಪ್ಪಿದ ಘಟನೆ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.


ಗ್ರಾಮದ ರೈತನಾದ ಕರಬಸಪ್ಪ‌ ಕಡೇನಾಯಕನಹಳ್ಳಿ(50) ಹಾಗೂ ಅವರ ಮಗ ದರ್ಶನ ಕಡೇನಾಯಕನಹಳ್ಳಿ(26) ಮೃತಪಟ್ಟ ದುರ್ದೈವಿಗಳು. ಇವರು ಗ್ರಾಮದ ಹೊರಭಾಗದಲ್ಲಿದ್ದ ಜಮೀನಿನಲ್ಲಿ ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ ಸ್ಟಾರ್ಟ್ ಮಾಡಲು ಹೋಗಿದ್ದಾರೆ. ಈ ಸಮಯದಲ್ಲಿ ವಿದ್ಯುತ್ ಆಕಸ್ಮಿಕವಾಗಿ ತಗುಲಿ ಅಪ್ಪ-ಮಗ ಸಾವನ್ನಪ್ಪಿದ್ದಾರೆ. ತಾಲೂಕಿನ ಹಲಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version