Home ಕ್ರೀಡೆ ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹ

ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹ

0

100 ಗ್ರಾಂ ತೂಕ ಹೆಚ್ಚಳದಿಂದ ಅವರನ್ನು ಫೈನಲ್ ಪಂದ್ಯಕ್ಕೆ ಅನರ್ಹಗೊಳಿಸಲಾಗಿದೆ

ಪ್ಯಾರಿಸ್‌: ವಿನೇಶ್ ಫೋಗಟ್ ಕುಸ್ತಿ ಫೈನಲ್‌ ಸ್ಪರ್ಧೆಯಿಂದ ಅನರ್ಹರಾಗಿದ್ದಾರೆ.
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ವಿನೇಶ್‌ ಫೋಗಟ್‌ ಫೈನಲ್‌ ತಲುಪಿದ್ದರು. ಆದರೆ ಹೆಚ್ಚಿನ ತೂಕ ಹೊಂದಿದ ಹಿನ್ನೆಲೆಯಲ್ಲಿ ಫೋಗಟ್‌ ಫೈನಲ್‌ನಿಂದ ಅನರ್ಹರಾಗಿದ್ದಾರೆ ಎಂದು ವರದಿಯಾಗಿದೆ. ಫೈನಲ್‌ನಲ್ಲಿ ಆಡಿ ಬಂಗಾರದ ಪದಕದ ನಿರೀಕ್ಷೆಯಲ್ಲಿದ್ದ ಮಹಿಳಾ ಕುಸ್ತಿ 50 ಕೆಜಿ ತರಗತಿಯಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಸುದ್ದಿಯನ್ನು ಭಾರತೀಯ ತಂಡವು ವಿಷಾದದಿಂದ ಹಂಚಿಕೊಂಡಿದೆ. ತೂಕ ಹೆಚ್ಚಳದಿಂದ ಅವರನ್ನು ಫೈನಲ್ ಪಂದ್ಯಕ್ಕೆ ಅನರ್ಹಗೊಳಿಸಲಾಗಿದೆ. ಅವರ ತೂಕದಲ್ಲಿ 100 ಗ್ರಾಂವರೆಗೆ ಹೆಚ್ಚಳವಾಗಿದೆ ಎನ್ನಲಾಗಿದೆ.

Exit mobile version