Home News ವಾರದಲ್ಲಿ ಜಿಲ್ಲೆಯ ೨ನೇ ಬಾಣಂತಿಯ ಸಾವು

ವಾರದಲ್ಲಿ ಜಿಲ್ಲೆಯ ೨ನೇ ಬಾಣಂತಿಯ ಸಾವು

ಕೊಪ್ಪಳ: ಕೆಲ ದಿನಗಳ ಹಿಂದೆಯಷ್ಟೇ ಬಾಣಂತಿಯೊಬ್ಬರ ಮೃತಪಟ್ಟಿದ್ದರು. ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಮತ್ತೋರ್ವ ಬಾಣಂತಿಯೊಬ್ಬರು ಸಾವನ್ನಪ್ಪಿದ್ದಾರೆ. ಆತಂಕ ಮೂಡಿಸಲಾಯಿತು.

ಕುಕನೂರು ತಾಲ್ಲೂಕಿನ ಆಡೂರು ಗ್ರಾಮದ ರೇಣುಕಾ ಪ್ರಕಾಶ ಹಿರೇಮನಿ(೨೨) ಎನ್ನುವ ಬಾಣಂತಿ ಕೊನೆಯುಸಿರೆಳೆದಿದ್ದಾರೆ. ಸೋಮವಾರ ರಾತ್ರಿ ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು, ರಾತ್ರಿ 2 ಗಂಟೆಯ ಸುಮಾರಿಗೆ ಸಿಝರಿನ್ ಮಾಡಲಾಗಿದೆ. ಬಳಿಕ ಬಾಣಂತಿಯನ್ನು ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ, ಸ್ವಲ್ಪ ಸಮಯದ ನಂತರ ವಾಂತಿಯಾಗಲು ಶುರುವಾಗಿದೆ, ನಂತರ 4 ಗಂಟೆಯ ಸುಮಾರಿಗೆ ಬಾಣಂತಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಬಾಣಂತಿ ರೇಣುಕಾ ಅಂತ್ಯಕ್ರಿಯೆ ಸ್ವಗ್ರಾಮ ಆಡೂರು ಗ್ರಾಮದಲ್ಲಿ ನೆರವೇರಲಿದೆ.

Exit mobile version