ಕಿತ್ತೂರ: ಪ್ರಹ್ಲಾದ ಜೋಶಿ ಅವರಿಂದ ಲಿಂಗಾಯತ ಸಮಾಜ ತುಳಿಯುವ ಕೆಲಸ ಆಗುತ್ತಿದ್ದು, ಲಿಂಗಾಯತರು ಅವರನ್ನು ಕಿತ್ತು ಹಾಕಿದಾಗ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಕಿತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಸ್ವಾಮೀಜಿಗಳಿಗೆ ದುಡ್ಡು ಕೊಟ್ಟು ಖರೀದಿ ಮಾಡುವ ಷಡ್ಯಂತ್ರ ನಡೆದಿದೆ. ಈ ಕುರಿತು ದಾಖಲೆಗಳಿವೆ. ಇದನ್ನು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದರು. ಲಿಂಗಾಯತರು, ಮುಸ್ಲಿಮರನ್ನು ತುಳಿಯುವುದೇ ಜೋಶಿ ಅವರ ಕೆಲಸವಾಗಿದ್ದು ಅವರನ್ನು ಸೋಲಿಸದಿದ್ದರೆ ಲಿಂಗಾಯತ ಸಮಾಜಕ್ಕೆ ಅರ್ಥವಿಲ್ಲ ಎಂದು ಭಾವುಕರಾದರು. ಹಿಂದಿ ಪ್ರಚಾರ ಸಭಾ ಕಟ್ಟಿದವರು ಯಾರು…? ಅದನ್ನು ಕಿತ್ತುಕೊಂಡಿದ್ದಾರೆ. ನಾನು ಊರಲ್ಲಿ ಇದ್ದರೆ ಕಿತ್ತುಕೊಳ್ಳುವ ಧೈರ್ಯ ಅವರಿಗಿದ್ದಿಲ್ಲ. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದರು.