Home ನಮ್ಮ ಜಿಲ್ಲೆ ಕೊಪ್ಪಳ ಲಾರಿ ತಂದು ಕ್ವಿಂಟಲಗಟ್ಟಲೆ ಮಾಲು ಹೊತ್ತೊಯ್ದ ಖದೀಮರು

ಲಾರಿ ತಂದು ಕ್ವಿಂಟಲಗಟ್ಟಲೆ ಮಾಲು ಹೊತ್ತೊಯ್ದ ಖದೀಮರು

0

ಕುಷ್ಟಗಿ: ೮೦ ಕ್ವಿಂಟಲ್ ಮೆಕ್ಕೆಜೋಳ ಕಳ್ಳತನವಾದ ಘಟನೆ ಹಿರೇನಂದಿಹಾಳ ಹತ್ತಿರದ ಕಪಿಲತೀರ್ಥ ತೋಟಗಾರಿಕಾ ರೈತ ಉತ್ಪಾದಕರ ಘಟಕದ ಉಗ್ರಾಣದಲ್ಲಿ ನಡೆದಿದೆ.
ತಾಲೂಕಿನ ಹಿರೇನಂದಿಹಾಳ ಸೀಮಾದ ಕುಷ್ಟಗಿ-ಗಜೇಂದ್ರಗಡ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕಪಿಲತೀರ್ಥ ತೋಟಗಾರಿಕಾ ರೈತ ಉತ್ಪಾದಕರ ಘಟಕದಲ್ಲಿ ೫೦೦ ಹಾಗೂ ೨೦೦ ಮೆಕ್ಕೆಜೋಳದ ಚೀಲ ಪ್ರತ್ಯೇಕವಾಗಿ ಇರಿಸಲಾಗಿತ್ತು. ಅದರಲ್ಲಿನ 124 ಮೆಕ್ಕೆಜೋಳದ ಚೀಲಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಲಾರಿ ಜೊತೆಗೆ ಬಂದಿರುವ ಕಳ್ಳರು ಉಗ್ರಾಣದ ಹಿಂಬದಿಯ ಕಿಟಕಿ ಮುರಿದು ಒಳಗಡೆಗೆ ನುಗ್ಗಿ ಉಗ್ರಾಣದ ಮುಖ್ಯ ಬಾಗಿಲ ಮುಖಾಂತರ ಕಳ್ಳತನ ಮಾಡಿದ್ದಲ್ಲದೇ ಉಗ್ರಾಣದಲ್ಲಿದ್ದ ನಾಲ್ಕು ಸಿಸಿ ಕ್ಯಾಮೆರಾಗಳನ್ನು ಕೂಡ ಎಗರಿಸಿದ್ದಾರೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version