Home ಅಪರಾಧ ಲಾರಿಯಲ್ಲಿದ್ದ ಕೊಳವೆ ಪೈಪ ಇಳಿಸುವಾಗ ಅವಘಡ: ಇಬ್ಬರು ಕಾರ್ಮಿಕರ ಸಾವು

ಲಾರಿಯಲ್ಲಿದ್ದ ಕೊಳವೆ ಪೈಪ ಇಳಿಸುವಾಗ ಅವಘಡ: ಇಬ್ಬರು ಕಾರ್ಮಿಕರ ಸಾವು

0

ಕುಷ್ಟಗಿ : ಲಾರಿಯಲ್ಲಿದ್ದ ಕೊಳವೆ ಪೈಪಗಳನ್ನು ಇಳಿಸುವಾಗ ಅವಘಡ ನಡೆದು ಇಬ್ಬರು ಕೆಲಸಗಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ಸರ್ಕಾರಿ ಕೈಗಾರಿಕಾ ಪ್ರದೇಶದ ಗ್ರಾನೈಟ್ ಫ್ಯಾಕ್ಟರಿ ಆವರಣದಲ್ಲಿ ಈ ಘಟನೆ ನಡೆದಿದೆ ಅಮೃತ ಯೋಜನೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಕೊಳವೆ ಪೈಪಗಳನ್ನು ಬೆಂಗಳೂರಿನಿಂದ ತರಿಸಲಾಗಿತ್ತು. ಲಾರಿಯಲ್ಲಿದ್ದ ಕೊಳವೆಗಳನ್ನು ಇಳಿಸುವಾಗ ಈ ಅವಘಡ ಸಂಭವಿಸಿದೆ. ಮೃತರನ್ನು ಕನಕಗಿರಿ ತಾಲ್ಲೂಕು ಓಬಳಬಂಡಿ ಗ್ರಾಮದ ಶರಣಪ್ಪ (28) ಹಾಗೂ ಬಾಗಲಕೋಟೆಯ ಜಿಲ್ಲೆಯ ಇಳಕಲ್ ತಾಲ್ಲೂಕಿನ ತೊಂಡಿಹಾಳ ಗ್ರಾಮದ ಬೀರಪ್ಪ (19) ಎಂದು ಗುರುತಿಸಲಾಗಿದೆ. ಇನ್ನು ಮತ್ತೊಬ್ಬ ಕಾರ್ಮಿಕ ವಿಜಯಪುರ ಮೂಲದ ರಾಜು ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಮೂಲದ ದತ್ತಾತ್ರೆಯ ಎಂಬುವವರು ಕಾಮಗಾರಿಯ ಗುತ್ತಿಗೆದಾರರು ಎಂಬುದು ತಿಳಿದಿದೆ ಎಂದು ಸಬ್ ಇನ್‌ಸ್ಪೆಕ್ಟ‌ರ್ ಹನುಮಂತಪ್ಪ ತಳವಾರ ತಿಳಿಸಿದರು. ಗಂಗಾವತಿ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Exit mobile version