Home ನಮ್ಮ ಜಿಲ್ಲೆ ಕೊಪ್ಪಳ ಲಡ್ಡು ಪ್ರಸಾದಕ್ಕೆ ೧೦೦ ರೂ: ಮಾಲಾಧಾರಿಗಳ ಆಕ್ರೋಶ

ಲಡ್ಡು ಪ್ರಸಾದಕ್ಕೆ ೧೦೦ ರೂ: ಮಾಲಾಧಾರಿಗಳ ಆಕ್ರೋಶ

0

ಗಂಗಾವತಿ(ಕೊಪ್ಪಳ): ಲಡ್ಡು ಪ್ರಸಾದಕ್ಕೆ ೧೦೦ ರೂ. ಮಾಡಿದ್ದಕ್ಕೆ ಹನುಮಮಾಲಾಧಾರಿಗಳು ಆಕ್ರೋಶ ವ್ಯಕ್ತಪಡಿದರು.

ತಾಲ್ಲೂಕಿನ ಚಿಕ್ಕರಾಂಪುರ ವೇದ ಪಾಠ ಶಾಲೆಯ ಬಳಿ ಲಾಡು ಪ್ರಸಾದ ಕೌಂಟರ್ ತೆರಲಾಗಿತ್ತು. ಕಳೆದ ವರ್ಷ ೨೫ ರೂ.ಗೆ ಒಂದು ಲಾಡು ನೀಡಲಾಗಿತ್ತು. ಆದರೆ ಈ ವರ್ಷ ೧೦೦ ರೂ.ಗೆ ಲಾಡು ಪ್ರಸಾದ ನೀಡಲಾಗುತ್ತಿದೆ. ತೀರ್ಥ, ಲಾಡು, ದಾರ, ಕುಂಕುಮ, ಆಂಜನೇಯನ ಚಿತ್ರವಿರುವ ಹಾಳೆ ನೀಡಲಾಗುತ್ತಿದೆ. ಪ್ರತ್ಯೇಕವಾಗಿ ಲಾಡು ಮಾತ್ರ ಕೇಳಿದರೆ, ನೀಡುತ್ತಿಲ್ಲ. ಹೆಚ್ಚವರಿಯಾಗಿ ಲಾಡು ಬೇಕಾದರೆ ೧೦೦ ರೂ.ಗೆ ಎರಡು ಲಾಡು ತೆಗೆದುಕೊಳ್ಳಬೇಕಿದೆ ಎಂದು ಹನುಮಮಾಲಾಧಾರಿಗಳು ವಿರೋಧ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿದ ಆಂಜನೇಯ ದೇವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ, ಹನುಮ ಮಾಲಾಧಾರಿಗಳ ಜತೆ ಮಾತನಾಡಿ, ಸಮಸ್ಯೆ ಪರಿಹರಿಸಿದರು‌. ಬಳಿಕ ಪ್ರತ್ಯೇಕವಾಗಿ ೨೫ ರೂ.ನಂತೆ ಲಾಡು ವಿತರಣೆ ಮಾಡಿದರು.

Exit mobile version