Home ಅಪರಾಧ ರೈಲ್ವೆ ಹಳಿಗೆ ಸಿಲುಕಿ ಮೂವರು ಯುವಕರು ಸಾವು

ರೈಲ್ವೆ ಹಳಿಗೆ ಸಿಲುಕಿ ಮೂವರು ಯುವಕರು ಸಾವು

0

ಕೊಪ್ಪಳ(ಗಂಗಾವತಿ): ರೈಲ್ವೆ ಹಳಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟ ಘಟನೆ ಗಂಗಾವತಿ ನಗರದ ಹೊರವಲಯದಲ್ಲಿ ಗುರುವಾರ ನಡೆದಿದೆ.

ಮೃತ ಯುವಕರನ್ನು ಗಂಗಾವತಿ ತಾಲ್ಲೂಕಿನ ಮೌನೇಶ್ ಪತ್ತಾರ(23), ಸುನೀಲ್ (23), ವೆಂಕಟ ಭೀಮನಾಯ್ಕ(20) ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿಯಿಂದ ಸಿಂಧನೂರಿಗೆ ಗುರುವಾರ ರಾತ್ರಿ ಸುಮಾರು ೯.೩೦ಕ್ಕೆ ತೆರಳುತ್ತಿದ್ದ ರೈಲು ಹರಿದು, ಮೂವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಶವಗಳ ಸಮೀಪದ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಯುವಕರು ಕುಡಿದ ಮತ್ತಿನಲ್ಲಿ ರೈಲ್ವೆ ಹಳಿಯ ಮೇಲೆ ಮಲಗಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version