Home ತಾಜಾ ಸುದ್ದಿ ರೈತ ಹುತಾತ್ಮ ದಿನಾಚರಣೆ: ನವಲಗುಂದ – ವಾಹನ ಸಂಚಾರ ಮಾರ್ಗ ಬದಲು

ರೈತ ಹುತಾತ್ಮ ದಿನಾಚರಣೆ: ನವಲಗುಂದ – ವಾಹನ ಸಂಚಾರ ಮಾರ್ಗ ಬದಲು

0

ಧಾರವಾಡ : ನಾಳೆ ಜುಲೈ ೨೧ ರಂದು ನವಲಗುಂದ ಶಹರದಲ್ಲಿ ರೈತ ಹುತಾತ್ಮ ದಿನಾಚಾರಣೆಯನ್ನು ಆಚರಿಸುವ ಪ್ರಯುಕ್ತ ಭಾರಿ ವಾಹನಗಳ ಸುಗಮ ಸಂಚಾರ ಹಿತದೃಷ್ಟಿಯಿಂದ ಮಾರ್ಗ ಬದಲಾವಣೆ ಅಗತ್ಯವಿದೆ.

ಈ ಕುರಿತು ಇಂದು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ನವಲಗುಂದ ಶಹರ ಮೂಲಕ ಸಂಚರಿಸುವ ಭಾರಿ ವಾಹನಗಳು, ನಾಳೆ ಬೆಳಿಗ್ಗೆ ೮ ಗಂಟೆಯಿAದ ರಾತ್ರಿ ೮ ಗಂಟೆಯವರೆಗೆ ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ಬರುವ ಭಾರಿ ವಾಹನಗಳನ್ನು ನರಗುಂದ, ಅಳಗವಾಡಿ, ತಿರ್ಲಾಪೂರ, ಹೆಬಸೂರ, ಬ್ಯಾಹಟ್ಟಿ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ಹೋಗುವಂತೆ ಹಾಗೂ ಹುಬ್ಬಳ್ಳಿ ಕಡೆಯಿಂದಾ ಬರುವ ಭಾರಿ ವಾಹನಗಳನ್ನು ಕುಸುಗಲ್ ದಿಂದ ಬ್ಯಾಹಟ್ಟಿ, ಹೆಬಸೂರ, ತಿರ್ಲಾಪೂರ, ಅಳಗವಾಡಿ ಮಾರ್ಗವಾಗಿ ನರಗುಂದ ಕಡೆಗೆ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಪೊಲೀಸ ಹಾಗೂ ಸಂಬಂಧಿಸಿದಂತೆ ಇಲಾಖೆಗಳಿಗೆ ಅವರು ಆದೇಶಿಸಿದ್ದಾರೆ.

Exit mobile version