Home ತಾಜಾ ಸುದ್ದಿ ರಾಯಲ್ ‘ದರ್ಶನ’: ಕುಟುಂಬದ ಜತೆ ಸಿನಿಮಾ ವೀಕ್ಷಿಸಿದ ಚಾಲೆಂಜಿಂಗ್ ಸ್ಟಾರ್

ರಾಯಲ್ ‘ದರ್ಶನ’: ಕುಟುಂಬದ ಜತೆ ಸಿನಿಮಾ ವೀಕ್ಷಿಸಿದ ಚಾಲೆಂಜಿಂಗ್ ಸ್ಟಾರ್

0

ಜನವರಿ 24 ರಂದು ಬಿಡುಗಡೆಯಾಗಲಿರುವ ರಾಯಲ್ ಸಿನಿಮಾವನ್ನು ದರ್ಶನ್ ಕಣ್ತುಂಬಿಕೊಂಡಿದ್ದಾರೆ

ಸುಮಾರು ಏಳೆಂಟು ತಿಂಗಳ ನಂತರ ದರ್ಶನ್ ಥಿಯೇಟರ್ ಮುಖ ನೋಡಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಆಸ್ಪತ್ರೆ, ಫಾರ್ಮ್ ಹೌಸ್, ಹಬ್ಬ ಅಂತೆಲ್ಲ ಬ್ಯುಸಿಯಾಗಿದ್ದ ದರ್ಶನ್, ಅಮ್ಮ, ತಮ್ಮ ಹಾಗೂ ಮಕ್ಕಳ ಜತೆ ಸಿನಿಮಾ ವೀಕ್ಷಿಸಿದ್ದಾರೆ. ಜನವರಿ 24 ರಂದು ಬಿಡುಗಡೆಯಾಗಲಿರುವ ರಾಯಲ್ ಸಿನಿಮಾವನ್ನು ದರ್ಶನ್ ಕಣ್ತುಂಬಿಕೊಂಡಿದ್ದಾರೆ.

ದರ್ಶನ್ ಸಹೋದರ ದಿನಕರ್ ತೂಗುದೀಪ ಆಕ್ಷನ್ ಕಟ್ ಹೇಳಿರುವ ರಾಯಲ್ ಸಿನಿಮಾವನ್ನು ಸೋಮವಾರ ಕುಟುಂಬದ ಜತೆ ವೀಕ್ಷಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದರ್ಶನ್ ಕುಟುಂಬ ಹಾಗೂ ನಿರ್ಮಾಪಕರಾದ ಜಯಣ್ಣ ಹಾಗೂ ಭೋಗೇಂದ್ರ ಅವರ ಕುಟುಂಬದ ಸದಸ್ಯರಿಗೆ ಮಾತ್ರ ಏರ್ಪಡಿಸಲಾಗಿದ್ದ ವಿಶೇಷ ಪ್ರದರ್ಶನದಲ್ಲಿ ನಟ ದರ್ಶನ್, ಮೀನಾ ತೂಗುದೀಪ, ದಿನಕರ್ ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಸಿನಿಮಾ ವೀಕ್ಷಿಸಿದ್ದಾರೆ.

ವಿರಾಟ್ ಹಾಗೂ ಸಂಜನಾ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟ್ರೇಲರ್ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿವೆ. ಇದೀಗ ದರ್ಶನ್ ಸಿನಿಮಾ ವೀಕ್ಷಿಸಿದ ಬಳಿಕ ಸಿನಿಮಾ ಮತ್ತೊಂದು ಹಂತದ ನಿರೀಕ್ಷೆ ಹುಟ್ಟುಹಾಕಿದೆ.

ರಘು ಮುಖರ್ಜಿ, ಛಾಯಾಸಿಂಗ್, ಅಚ್ಯುತ್‌ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ. ಚರಣ್‌ರಾಜ್ ಸಂಗೀತ ಸಂಯೋಜಿಸಿದ್ದು, ಸಂಕೇತ್ ಛಾಯಾಗ್ರಹಣ ರಾಯಲ್ ಚಿತ್ರಕ್ಕಿದೆ.

Exit mobile version