Home ನಮ್ಮ ಜಿಲ್ಲೆ ಉತ್ತರ ಕನ್ನಡ ರಾಮಮಂದಿರ ನಿರ್ಮಾಣ ಮಾಡದಂತೆ ಕಾಂಗ್ರೆಸ್‌ ಕುತಂತ್ರ ಮಾಡಿತ್ತು

ರಾಮಮಂದಿರ ನಿರ್ಮಾಣ ಮಾಡದಂತೆ ಕಾಂಗ್ರೆಸ್‌ ಕುತಂತ್ರ ಮಾಡಿತ್ತು

0

ಕಾರವಾರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡದಂತೆ ಕಾಂಗ್ರೆಸ್‌ ಕುತಂತ್ರ ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಶಿರಸಿಯಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಮರುದಿನ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ. ಇಂತಹ ಕೆಲಸ ಮಾಡಲು 56 ಇಂಚಿನ ಎದೆಗಾರಿಕೆ ಬೇಕಿತ್ತು. ಕಾಂಗ್ರೆಸ್ ಪಾರ್ಟಿ ಮತ್ತು ಇತರರು 70 ವರ್ಷ ರಾಮ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದ್ದರು. ಇಷ್ಟೆಲ್ಲಾ ಆದರೂ ರಾಮ ಮಂದಿರ ಟ್ರಸ್ಟ್ ಅವರು ಕಾಂಗ್ರೆಸ್ ಪಾಪ ಬದಿಗಿಟ್ಟು ಆಹ್ವಾನಿಸಿದರು. ಆದರೆ ಕಾಂಗ್ರೆಸ್ ನಾಯಕರು ರಾಮ ಮಂದಿರ ಆಹ್ವಾನವನ್ನು ತಿರಸ್ಕರಿಸಿದರು.
ರಾಮ ಜನ್ಮಭೂಮಿ ಬಾಬರಿ ಮಸೀದಿ ಪ್ರಕರಣದ ಪ್ರಮುಖ ದೂರುದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರನ್ನು ಉಲ್ಲೇಖಿಸಿದ ಮೋದಿ, ಅನ್ಸಾರಿ ಕುಟುಂಬ ಮೂರು ತಲೆಮಾರುಗಳಿಂದ ಹೋರಾಟ ಮಾಡುತ್ತಾ ಬಂದಿತ್ತು. ಅನ್ಸಾರಿ ಕುಟುಂಬಕ್ಕೂ ಆಹ್ವಾನ ನೀಡಲಾಗಿತ್ತು. ಅವರು ರಾಮಮಂದಿರ ಉದ್ವಾಟನೆ ದಿನ ಇಡೀ ದಿನ ಉಪಸ್ಥಿತರಿದ್ದರು.

Exit mobile version