Home ತಾಜಾ ಸುದ್ದಿ ರನ್ಯಾ ರಾವ್‌ ಪ್ರಕರಣ: ಸಿಐಡಿ ತನಿಖೆ ಹಿಂಪಡೆತ ಕುರಿತು ಪರಮೇಶ್ವರ್‌ ಸ್ಪಷ್ಟನೆ

ರನ್ಯಾ ರಾವ್‌ ಪ್ರಕರಣ: ಸಿಐಡಿ ತನಿಖೆ ಹಿಂಪಡೆತ ಕುರಿತು ಪರಮೇಶ್ವರ್‌ ಸ್ಪಷ್ಟನೆ

0

ಬೆಂಗಳೂರು: ನಟಿ ರನ್ಯಾ ರಾವ್ ಅವರ ಪ್ರಕರಣದಲ್ಲಿ ಪೊಲೀಸ್ ಪ್ರೊಟೋಕಾಲ್ ಉಲ್ಲಂಘನೆ ಕುರಿತಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಆದರೆ 24 ಗಂಟೆಯಲ್ಲಿ ಹಿಂಪಡೆಯಲಾಗಿತ್ತು. ಈ ಕುರಿತು ರಾಜ್ಯ ಗೃಹಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪೊಲೀಸ್ ಪ್ರೊಟೊಕಾಲ್ ಉಲ್ಲಂಘನೆ ಬಗ್ಗೆ ತಿಳಿದುಕೊಳ್ಳಲು ನಾನು ಸಿಐಡಿ ತನಿಖೆಗೆ ಆದೇಶಿಸಿದೆ. ಅಷ್ಟರೊಳಗಾಗಲೇ ಸಿಎಂ ಕಚೇರಿಯಿಂದ ಮೇಲ್ಮಟ್ಟದ ತನಿಖೆಗೆ ಆದೇಶ ನೀಡಲಾಗಿತ್ತು. ಒಂದೇ ವಿಚಾರಕ್ಕೆ ಎರಡು ಕಡೆ ತನಿಖೆ ಆಗೋದು ಬೇಡ ಎಂಬ ಕಾರಣಕ್ಕೆ ನಾವು ಸಿಐಡಿ ತನಿಖೆಯನ್ನು ಹಿಂಪಡೆದೆವು, ತನಿಖೆಗೆ ಆದೇಶ ನೀಡಲೂ ಯಾರು ಒತ್ತಡ ಹೇರಿರಲಿಲ್ಲ. ಹಿಂದಕ್ಕೆ ಪಡೆಯಲೂ ಯಾರೂ ಒತ್ತಡ ಹೇರಿಲ್ಲ. ಎರಡೇರಡು ತನಿಖೆ ಬೇಡ ಎಂಬ ಕಾರಣಕ್ಕೆ ನಾವು ಹಿಂಪಡೆದಿದ್ದೇವೆ ಅಷ್ಟೇ. ಇಲ್ಲಿ ಯಾವುದೇ ಗೊಂದಲ ಬೇಡ ಎಂದರು.

Exit mobile version