Home ನಮ್ಮ ಜಿಲ್ಲೆ ಕೊಪ್ಪಳ ಯುವಕರಿಂದ ಮೋದಿ, ಮೋದಿ ಘೋಷಣೆ: ಸಚಿವ ತಂಗಡಗಿಗೆ ಮುಜುಗರ

ಯುವಕರಿಂದ ಮೋದಿ, ಮೋದಿ ಘೋಷಣೆ: ಸಚಿವ ತಂಗಡಗಿಗೆ ಮುಜುಗರ

0

ಕನಕಗಿರಿ: ಇತ್ತೀಚೆಗೆ ಕಾರಟಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿ, ಮೋದಿ ಎನ್ನುವ ಯುವಕರಿಗೆ ಕಪ್ಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆ ರಾಜ್ಯ ವ್ಯಾಪಿ ಸುದ್ದಿಯಾಗಿತ್ತು. ಹಲವು ಕಡೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆಗಳೇ ನಡೆದಿವೆ. ಆದರೆ, ಗರುಡೋತ್ಸವ ನಿಮಿತ್ತವಾಗಿ ಕುಟುಂಬ ಸಮೇತರಾಗಿ ಕನಕಾಚಲಪತಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಸಚಿವ ಶಿವರಾಜ್ ತಂಗಡಗಿ ಹೊರ ಬರುತ್ತಿದಂತೆ ಬಿಜೆಪಿ ಕಾರ್ಯಕರ್ತರು, ಯುವಕರು ಮೋದಿ, ಮೋದಿ ಎಂದು ಕೂಗಿದಾಗ ಸಚಿವ ಶಿವರಾಜ್ ತಂಗಡಗಿ ತುಸು ನಕ್ಕು ಮುಂದೆ ಸಾಗಿದರು. ಈ ಕುರಿತು ಸ್ಥಳೀಯ ಪೊಲೀಸ್ ಪೇದೆಗಳು ಯುವಕರ ವಿಡಿಯೋ ತುಣುಕುಗಳನ್ನು ಸೆರೆ ಹಿಡಿದಿದ್ದಾರೆ.

Exit mobile version