ಹುಬ್ಬಳ್ಳಿ: ರಾಜ್ಯ ಸರ್ಕಾರಕ್ಕೆ ಸದ್ಯಕ್ಕೇನು ತೊಂದರೆ ಇಲ್ಲ. ಈ ಬಾರಿ ಸ್ವಲ್ಪ ಧಗೆ ಜಾಸ್ತಿ ಇರುತ್ತದೆ. ಯುಗಾದಿಗೆ ಕಾಲಜ್ಞಾನ ಸಂಗತಿಗಳನ್ನು ಹೇಳುತ್ತೇನೆ ಎಂದು ಕೋಡಿಮಠ ಶ್ರೀ ಶಿವಾನಂದ ರಾಜಯೋಗೀಂದ್ರ ಮಹಾಸ್ವಾಮಿಗಳು ನುಡಿದರು.
ಇಲ್ಲಿನ ಶ್ರೀ ಸಿದ್ಧಾರೂಢಮಠದಲ್ಲಿ ವಿಶ್ವ ವೇದಾಂತ ಪರಿಷತ್‌ನಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಯುಗಾದಿಗೆ ಎಲ್ಲ ಸಂಗತಿಗಳನ್ನು ಹೇಳುವೆ. ಈಗ ಮಧ್ಯದಲ್ಲಿ ಹೇಳೋಕೆ ಬರುವುದಿಲ್ಲ ಎಂದು ನುಡಿದರು.