ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ವಜ್ರಮುನಿ ಡೈಲಾಗ್ ‘ಯಲಾ ಕುನ್ನಿ..’ ಇಂದಿಗೂ ಅದೇ ಖದರ್‌ನ್ನು ಹೊಂದಿದೆ.
ಈ ಡೈಲಾಗ್ ಇಟ್ಟುಕೊಂಡೇ ನಟ ಕೋಮಲ್ ವಜ್ರಮುನಿ ಅವರ ರೂಪದಲ್ಲಿ ಕಾಣಿಸಿಕೊಂಡಿರುವ ಚಿತ್ರವೆ ಯಲಾ ಕುನ್ನಿ. ಇಂದು ಈ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು ನೋಡುಗರ ಮನಸೂರೆಗೊಂಡಿದೆ. ಯಲಾ ಕುನ್ನಿ ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ‘ಸೌಭಾಗ್ಯ ಸಿನಿಮಾಸ್’ ಬ್ಯಾನರ್ ಮೂಲಕ ಮಹೇಶ್ ಗೌಡ ಅವರು ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಎನ್.ಆರ್. ಪ್ರದೀಪ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ‘ನವರಸ ನಾಯಕ’ ಜಗ್ಗೇಶ್ ಅವರ ಮಗ ಯತಿರಾಜ್ ಹಾಗೂ ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಅವರು ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ನೋಡಿದರೆ 90ರ ದಶಕದ ಮೆಲುಕು ಹಾಕಿದಂತಾಗುತ್ತದೆ… ಒಮ್ಮೆ ಅದರ ಝಲಕ್ ನೋಡಿ…