ಧಾರವಾಡ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಿರುವ ಮುಡಾ ಹಗರಣವನ್ನು ಸಿಬಿಐ ಗೆ ವಹಿಸಬೇಕು ಎಂಬ ಅರ್ಜಿ ವಿಚಾರಣೆ ಮುಗಿದಿದ್ದು, ಧಾರವಾಡ ಹೈಕೋರ್ಟ್ ಪೀಠ ತೀರ್ಪು ಕಾಯ್ದಿರಿದೆ.
ನ್ಯಾ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಸೋವಾರ ಬೆಳಗ್ಗೆ ಯಿಂದಲೇ ವಿಚಾರಣೆ ಆರಂಭಿಸಿತು. ಸತತ ಆರು ಗಂಟೆಗಳ ಕಾಲ ವಾದ ಪ್ರತಿವಾದಿಗಳನ್ನು ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು.
ಸಾಮಾಜಿಕ ಹೋರಾಟಗಾರ ಸ್ನೇಹ ಮಯಿ ಕೃಷ್ಣ ಪರ ವಾದ ಮಂಡಿಸಿದ ಸುಪ್ರೀಂ ಕೋಟ್೯ ಹಿರಿಯ ವಕೀಲ ಮಣೀಂದರ ಸಿಂಗ್ ಪ್ರಬಲ ವಾದ ಮಂಡಿಸುತ್ತ,ಮುಡಾ ಕಚೇರಿಯಿಂದ ಪ್ರಮುಖ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ.
ತನಿಖೆ ನಿಷ್ಪಕ್ಷಪಾತ ನಡೆಯುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ಜನರ ಮನಸ್ಸಿನಲ್ಲಿ ಸ್ವತಂತ್ರ ತನಿಖೆ ನಡೆದಿದೆ ಎಂಬುದು ಲೋಕಾಯುಕ್ತ ತನಿಖೆಯಿಂದ ಸಾಧ್ಯವಿಲ್ಲ. ಹೀಗಾಗಿ, ಕೇಂದ್ರೀಯ ಸಂಸ್ಥೆಗಳ ತನಿಖೆ ನೀಡಬೇಕು ಎಂದರು.
ಈ ಹಂತದಲ್ಲಿ ಆರೋಪಿ ಸ್ಥಾನದಲ್ಲಿರುವವರ ವಾದ ಆಲಿಸಬೇಕಿಲ್ಲ.ಯಾವ ತನಿಖಾ ಸಂಸ್ಥೆ ತನಿಖೆ ನಡೆಸಬೇಕು ಎಂದು ಆರೋಪಿ ನಿರ್ಧರಿಸಲಾಗದು. ನಿಷ್ಪಕ್ಷಪಾತ ವಾದ ತನಿಖೆ ನಡೆಯಬೇಕಾದರೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂದು ಗಂಭೀರ ವಾದ ಮಂಡಿಸಿದರು. ದೊಡ್ಡ ರಾಜಕಾರಣಿಗಳ ವಿರುದ್ಧ ಆರೋಪ ಇರೋದ್ರಿಂದ ಸಿಬಿಐ ತನಿಖೆ ಅಗತ್ಯವಿದೆ.ಹೀಗಾಗಿ ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸುವ ಅಗತ್ಯತೆ ಕಾಣುತ್ತಿದೆ.ಹಗರಣ ನಡೆಯಲು ಅಧಿಕಾರಿಗಳು ನೆರವು ನೀಡಿದ್ದಾರೆ. ಏನೆಲ್ಲಾ ಬೆಳವಣಿಗೆಗಳು ಬೆಳಕಿಗೆ ಬಂದಿವೆ ಅವುಗಳನ್ನು ಮುಚ್ಚಿಡುವ ಕೆಲಸವಾಗುತ್ತಿದೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದರು.
ಕಂದಾಯ ಇಲಾಖೆಯ ಅಧಿಕಾರಿಗಳು ಆಕ್ಷೇಪಾರ್ಹವಾದ ಭೂಮಿ ಇದೆ ಎಂದು ಹೇಳಿದ್ದಾರೆ. ಆದರೆ, ಅದಾಗಲೇ ಭೂಮಿಯನ್ನು ಲೇಔಟ್ ಆಗಿ ರೂಪಿಸಲಾಗಿತ್ತು. ಇಂಥ ಅಧಿಕಾರಿಗಳಿರುವಾಗ ನ್ಯಾಯಯುತ ತನಿಖೆ ನಿರೀಕ್ಷಿಸಲಾಗದು ಎಂದರು.
ವಿಚಾರಣೆ ಮುಕ್ತಾಯವಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹ ಮಯಿ ಕೃಷ್ಣ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ಮಾಡಿರುವ ತಪ್ಪಿಗೆ ಸರಿಯಾದ ಶಿಕ್ಷೆ ಆಗಬೇಕಿದೆ. ಅವರು ಲೋಕಾಯುಕ್ತ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದರಿಂದ ನಿಷ್ಪಕ್ಷಪಾತವಾದ ತನಿಖೆ ಅಸಾಧ್ಯ ಎಂದರು.
ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಸಂಬಳ ತಿಂದು ಪ್ರಭಾವಿ ರಾಜಕಾರಣಿಗಳ ಪರ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ದ ಕೂಡ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇನೆ. ಇದು ದೇಶ ದ್ರೋಹದ ಕೆಲಸವಾಗಿದೆ. ಇದನ್ನು ರಾಜ್ಯದ ಜನರು ತಿಳಿಯಬೇಕು. ನ್ಯಾಯಾಲಯ ಈ ಪ್ರಕರಣವನ್ನು ಖಂಡಿತವಾಗಿಯೂ ಸಿಬಿಐ ಗೆ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಇಂದು ನಡೆದ ವಿಚಾರಣೆ ಯಲ್ಲಿ ಸ್ನಹಮಯಿ ಕೃಷ್ಣ ಪರವಾಗಿ ಮಣೀಂದರ ಸಿಂಗ್, ಸಿಎಂ ಸಿದ್ದರಾಮಯ್ಯ ಪರವಾಗಿ ಅಭಿಷೇಕ ಮನು ಸಿಂಗ್ವಿ,ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಪರ ಪ್ರೊ. ರವಿವರ್ಮ ಕುಮಾರ, ಜಾಗೆಯ ಮೂಲ ಮಾಲೀಕ ದೇವರಾಜ ಪರ ದುಷ್ಯಂತ ಧವೆ, ರಾಜ್ಯ ಸರ್ಕಾರದ ಪರ ಕಪಿಲ ಸಿಬಲ್ ವಾದ ಮಂಡಿಸಿದರು.