ಹುಬ್ಬಳ್ಳಿ: ಮುಚ್ಚಿಟ್ಟ ಸತ್ಯವನ್ನು ಅನಾವರಣಗೊಳಿಸುವ ಪ್ರಯತ್ನವೇ ದಿ ಸಾಬರಮತಿ ರಿಪೋರ್ಟ್ ಸಿನಿಮಾ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಗುಜರಾತ್‌ನಲ್ಲಿ 2022ರಲ್ಲಿ ನಡೆದ ಗೋದ್ರಾ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ದುರ್ಘಟನೆಯ ಬಗ್ಗೆ ಸಂಪೂರ್ಣ ಸತ್ಯವನ್ನು ಸಿನಿಮಾದ ಮೂಲಕ ಸಮಾಜದ ಮುಂದಿಡುವ “ದಿ ಸಾಬರಮತಿ ರಿಪೋರ್ಟ್” ಸಿನಿಮಾವನ್ನು
ವಿಕ್ಷಿಸಿದ ಅವರು ಅಂದು ಗುಜರಾತ್‌ನ ಗೋದ್ರಾದಲ್ಲಿ ನಡೆದ ಘಟನೆಯ ಸತ್ಯಾಂಶ ತಿಳಿಯಲು ಪ್ರತಿಯೊಬ್ಬರೂ ಈ ಸಿನಿಮಾ ನೋಡಲೇಬೇಕು, ಇದು ಮುಚ್ಚಿಟ್ಟ ಸತ್ಯದ ಅನಾವರಣ ಎಂದಿದ್ದಾರೆ.