ಕೊಪ್ಪಳ: ಮುಖ್ಯಮಂತ್ರಿ ಆಗುವ ಯೋಗ್ಯತೆ ಎಲ್ಲರಿಗೂ ಇದೆ. ಆದರೆ, ಕುರ್ಚಿ ಖಾಲಿ ಇಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಕೊಡುತ್ತಾರೆ ಎಂದರೆ ಯಾರಾದರೂ ಸುಮ್ಮನಿರುತ್ತಾರಾ?. ಆದರೆ, ಸಿಎಂ ಹುದ್ದೆ ತಾನಾಗಿಯೇ ಉದ್ಭವ ಆಗುವುದಿಲ್ಲ. ಅದು ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಗುಡಿಸಲಿನಲ್ಲಿ ಇದ್ದವನಿಗೂ ಸಿಎಂ ಆಗುವ ಅವಕಾಶ ಇದೆ ಎಂದರು.
ನಮ್ಮ ಮನೆಯಲ್ಲಿ ಚಾಕು ಈರುಳ್ಳಿ ಹೆಚ್ಚಲು ಮಾತ್ರ ಇಲ್ಲ ಎನ್ನುವ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ. ಬಿಜೆಪಿಯಲ್ಲಿ ಕೆಲವರನ್ನು ನಾಯಿಯಂತೆ ಒದರಲು ಇಟ್ಟುಕೊಂಡಿದ್ದಾರೆ. ಅದಕ್ಕೆ ಏನೂ ಮಾಡಲು ಆಗುವುದಿಲ್ಲ ಎಂದು ಕಿಡಿಕಾರಿದರು.