Home ನಮ್ಮ ಜಿಲ್ಲೆ ಚಿಕ್ಕಮಗಳೂರು ಮಳೆ ಅವಾಂತರ, ಮರ ಬಿದ್ದು ಮನೆ ಸಂಪೂರ್ಣ ನಾಶ

ಮಳೆ ಅವಾಂತರ, ಮರ ಬಿದ್ದು ಮನೆ ಸಂಪೂರ್ಣ ನಾಶ

0

ಚಿಕ್ಕಮಗಳೂರು: ಕಳಸ ತಾಲೂಕಿನಲ್ಲಿ ಗಾಳಿ-ಮಳೆ ಅಬ್ಬರ ಜೋರಾಗಿದ್ದು ಪರಿಣಾಮ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.

ನಸುಕಿನ ಜಾವ ಗಾಡ ನಿದ್ರೆಯಲ್ಲಿ ಮಲಗಿದ್ದ ಕುಟುಂಬ ರಾತ್ರಿ ಇಡೀ ಬಾರೀ ಬಿರುಗಾಳಿ ಮಳೆ ಬೆಳಿಗ್ಗೆ ಕಣ್ಣು ಬಿಡುವ ವೇಳೆಗೆ ಮನೆಯ ಮೇಲೆ ಬಿದ್ದ ಮರ ಗಾಬರಿಗೊಂಡು ಎಚ್ಚರ ಕಳಚಿ ಬೆಚ್ಚಿಬಿದ್ದ ಮನೆಯ ಜನರು.

ನಿರಂತರ ಸುರಿಯುತ್ತಿರುವ ಮಳೆ ಜೊತೆ ಕಳಸ ತಾಲೂಕಿನಲ್ಲಿ ಬಿರುಗಾಳಿ ಅಬ್ಬರಕ್ಕೆ ಮನೆ ಮೇಲೆ ಬಿದ್ದ ಬೃಹತ್ ಮರ ಒಂದು ಗಿರಿಜಾ ಎಂಬುವವರ ಮನೆ ಮೇಲೆ ಬಿದ್ದು ಕಟ್ಟಡ ಸಂಪೂರ್ಣ ಜಖಂಗೊಂಡಿದೆ. ಮನೆಯ ಗೋಡೆಗಳು ಕುಸಿದಿವೆ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳೆಲ್ಲ ಪುಡಿ ಪುಡಿಯಾಗಿ ನಾಶವಾಗಿವೆ.

ಮನೆಯಲ್ಲಿ ನಿದ್ರೆಯ ಮಂಪರಿನಲ್ಲಿ ಮಲಗಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ

Exit mobile version