Home ಅಪರಾಧ ಅಂಜಲಿ ಹಂತಕನ ಸ್ಥಳ ಮಹಜರು: ಸ್ಥಳೀಯರಿಂದ ಹಿಡಿಶಾಪ

ಅಂಜಲಿ ಹಂತಕನ ಸ್ಥಳ ಮಹಜರು: ಸ್ಥಳೀಯರಿಂದ ಹಿಡಿಶಾಪ

0

ಹುಬ್ಬಳ್ಳಿ: ವೀರಾಪುರ ಓಣಿಯ ಮೃತ ಅಂಜಲಿ ಅಂಬಿಗೇರ್ ನಿವಾಸಕ್ಕೆ ಆರೋಪಿ ಗಿರೀಶ ಸಾವಂತನನ್ನು ಕರೆದೊಯ್ದ ಸಿಐಡಿ ಅಧಿಕಾರಿಗಳು ಶುಕ್ರವಾರ ಸ್ಥಳ ಮಹಜರು ನಡೆಸಿದರು.

ಗುರುವಾರ ಆರೋಪಿಯನ್ನು 8 ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು, ತಡರಾತ್ರಿಯವರೆಗೂ ತೀವೃ ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಬೆನ್ನಲ್ಲೇ ಶುಕ್ರವಾರ ಆರೋಪಿಯನ್ನ ಮೃತ ಅಂಜಲಿ ನಿವಾಸಕ್ಕೆ ಕರೆತಂದಿದ್ದು, ರಿಹರ್ಸಲ್ ನಡೆಸಿದರು.

ಆರೋಪಿಯನ್ನ ಕೊಲೆ ನಡೆದ ಅಂಜಲಿ ನಿವಾಸಕ್ಜೆ ಕರೆ ತರುತ್ತಿದ್ದಂತೆ ರೊಚ್ಚಿಗೆದ್ದ ವೀರಪುರ ಓಣಿಯ ನಿವಾಸಿಗಳು, ಆರೋಪಿಗೆ ವಾಚಾಮ ಗೋಚರವಾಗಿ ನಿಂದಿಸಿದರು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದ್ದ ಬೆಂಡಿಗೇರಿ ಠಾಣೆಯ ಪೊಲೀಸರು ಅಂಜಲಿ ಅಂಬಿಗೇರ್ ನಿವಾಸಕ್ಕೆ ಹಾಗೂ ಆರೋಪಿಯನ್ನ ಕರೆಯುತ್ತಿರುವ ರಸ್ತೆ ಯುದ್ಧಕ್ಕೂ ಬಿಗಿ ಪೊಲೀಸ್ ಬಂದೋಬಸ್ ಏರ್ಪಡಿಸಿದ್ದರು.

Exit mobile version