Home News ಮಡಿಕೇರಿ ಚಲೋ ಕೈ ಬಿಡಿ

ಮಡಿಕೇರಿ ಚಲೋ ಕೈ ಬಿಡಿ

ಯಾರೋ ಪುಂಡ ಪೋಕರಿಗಳು ಎಸೆದಿರುವ ಮೊಟ್ಟೆ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಮಡಿಕೇರಿ ಚಲೋ ಕೈ ಬಿಡಿ ಎಂದು ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮನವಿ ಮಾಡಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವದು ದೊಡ್ಡ ವಿಚಾರ. ಮೊಟ್ಟೆ ಎಸೆದಿರುವುದು ಸರಿ ಎಂದು ನಾವು ಯಾರೂ ಹೇಳುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ ಎಂದರು. ಇಂತಹ ವಿಚಾರಕ್ಕೆ ಮಡಿಕೇರಿ ಚಲೋ ಮಾಡುವುದು ನಿಮ್ಮಂತ ನಾಯಕರಿಗೆ ಶೋಭೆ ತರುವುದಿಲ್ಲ. ರಾಜ್ಯದ ಸಮಸ್ಯೆಗಳನ್ನ ಪ್ರತಿಷ್ಠೆಯಾಗಿ ತಗೆದುಕೊಳ್ಳಿ ಎಂದು ಅವರು ಮನವಿ ಮಾಡಿದರು.

ಎಚ್‌ ವಿಶ್ವನಾಥ
Exit mobile version