ಮಂಡ್ಯ(ಕಿಕ್ಕೇರಿ): ಗೃಹಿಣಿ ತನ್ನ ೩ ವರ್ಷದ ಗಂಡು ಮಗುವಿನೊಂದಿಗೆ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಕಿಕ್ಕೇರಿ ಹೋಬಳಿ ಜಕ್ಕನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಪುಟ್ಟಸ್ವಾಮಿ ಪತ್ನಿ ಶಿಲ್ಪಾ(೨೭), ಪುತ್ರ ದೀಕ್ಷಿತ್(೩) ಮೃತಪಟ್ಟವರು. ಪ್ರಕರಣಕ್ಕೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಮನೆಯಲ್ಲಿ ಮೊದಲು ತನ್ನ ಪುತ್ರ ದೀಕ್ಷಿತ್‌ಗೆ ನೇಣು ಹಾಕಿದ್ದಾಳೆ. ನಂತರ ಪುತ್ರಿ ಧನುಶ್ರೀಯನ್ನೂ ಕೂಡ ನೇಣು ಹಾಕಲು ಮುಂದಾಗಿದ್ದಾಳೆ. ಧನುಶ್ರೀ ಭಯದಿಂದ ಮನೆಯಿಂದ ಹೊರಗಡೆ ಓಡಿ ಹೋದರೂ ವಿಚಲಿತಳಾಗದೆ ತಾನೂ ಕೂಡ ನೇಣುಬಿಗಿದುಕೊಂಡು ಮೃತಳಾಗಿದ್ದಾಳೆ. ಮೃತಳ ತಂದೆ ಕಾಂತರಾಜು ನೀಡಿದ ದೂರಿನ ಮೇರೆ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.