Home ನಮ್ಮ ಜಿಲ್ಲೆ ಮಂತ್ರಾಲಯದಲ್ಲಿ 36 ಅಡಿಯ ಅಭಯರಾಮ ಪ್ರತಿಷ್ಠಾಪನೆಗೆ ಸಿದ್ಧತೆ

ಮಂತ್ರಾಲಯದಲ್ಲಿ 36 ಅಡಿಯ ಅಭಯರಾಮ ಪ್ರತಿಷ್ಠಾಪನೆಗೆ ಸಿದ್ಧತೆ

0

ರಾಯಚೂರು: ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಆಂಧ್ರಪ್ರದೇಶದ ಮಂತ್ರಾಲಯದ ಕ್ಷೇತ್ರದಲ್ಲಿಯೂ ಶ್ರೀ ಅಭಯ ರಾಮನ 36 ಅಡಿ ಎತ್ತರದ ಬೃಹತ್ ಶಿಲಾಮೂರ್ತಿ ತಲೆ ಎತ್ತಿದೆ. ಧನುರ್ದಾರಿ ಶ್ರೀರಾಮನ ಮೂರ್ತಿ ಎಲ್ಲರನ್ನು ಆಕರ್ಷಿಸುತ್ತಿದೆ. ಈಗಾಗಲೇ 32 ಅಡಿ ಎತ್ತರದ ಅಭಯಾಂಜನೇಯ ಆಂಜನೇಯ ಸ್ವಾಮಿ ಮೂರ್ತಿ ದೇವಸ್ಥಾನದ ಎದುರಲ್ಲೇ ಅಭಯ ರಾಮನ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ವಿಶೇಷ ಪೂಜೆ ನೆರವೇರಿಸುವ ಮೂಲಕ ಮೂರ್ತಿಯನ್ನು ಪದಸ್ಥಲದ ಪೀಠದಲ್ಲಿ ನಿಲ್ಲಿಸಲಾಯಿತು. ಮೂರ್ತಿಯ ಕೆತ್ತನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕ್ರೇನ್ ಯಂತ್ರದ ನೆರವಿನಿಂದ ಸಹಾಯದಿಂದ ನಿಲ್ಲಿಸಲಾಯಿತು.

Exit mobile version