Home ಅಪರಾಧ ಭೀಕರ ಅಪಘಾತ: ವಿದೇಶದಿಂದ ಆಗಮಿಸಿದ್ದ ವ್ಯಕ್ತಿ ಸಾವು

ಭೀಕರ ಅಪಘಾತ: ವಿದೇಶದಿಂದ ಆಗಮಿಸಿದ್ದ ವ್ಯಕ್ತಿ ಸಾವು

0

ಉಡುಪಿ: ಅಜ್ಜರಕಾಡು ಅಗ್ನಿಶಾಮಕ ಇಲಾಖೆ ಬಳಿ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ಮಿಷನ್ ಆಸ್ಪತ್ರೆ ಬಳಿಯ ನಿವಾಸಿ ಸ್ಯಾಮುವೆಲ್ ಸದಾನಂದ ಕರ್ಕಡ (59) ಎಂದು ಗುರುತಿಸಲಾಗಿದ್ದು, ಅವರು ಎರಡು ದಿನಗಳ ಹಿಂದಷ್ಟೇ ವಿದೇಶದಿಂದ ಆಗಮಿಸಿದ್ದರು. ಮತ್ತೋರ್ವ ದ್ವಿಚಕ್ರ ಸವಾರ ಗಂಭೀರ ಸ್ಥಿತಿಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಖ್ಯಾತ ಜವಳಿ ಅಂಗಡಿಯ ಉದ್ಯೋಗಿ ಪವನ್ ಎಂದು ತಿಳಿದುಬಂದಿದೆ. ಫೆ. 17ರಂದು ರಾತ್ರಿ ಅಗ್ನಿಶಾಮಕ ಇಲಾಖೆ ಮುಂಭಾಗದಲ್ಲಿ ಘಟನೆ ನಡೆದಿದ್ದು,ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version