Home ತಾಜಾ ಸುದ್ದಿ ಭಕ್ತಿಯಿಲ್ಲದ ಜ್ಞಾನ ಅಹಂಕಾರಕ್ಕೆ ಮೂಲ

ಭಕ್ತಿಯಿಲ್ಲದ ಜ್ಞಾನ ಅಹಂಕಾರಕ್ಕೆ ಮೂಲ

0

ಬೆಳಗಾವಿ: ಭಕ್ತಿಯಿಲ್ಲದ ಜ್ಞಾನ ಅಹಂಕಾರಕ್ಕೆ ಮೂಲ. ಭಕ್ತಿ ಇಲ್ಲದ ಕರ್ಮ ಎಂದಿಗೂ ಸತ್ಕರ್ಮವೆನಿಸುವುದಿಲ್ಲ ಎಂದು ಆರ್‌ಎಸ್‌ಎಸ್‌ನ ಸರಸಂಘ ಸಂಚಾಲಕ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.
ಬೆಳಗಾವಿಯ ಎಸಿಪಿಆರ್ ಶತಮಾನೋತ್ಸವ ಸಮಾರಂಭದಲ್ಲಿ ಸಂಸ್ಥಾಪಕ ದಿ.ಗುರುದೇವ ರಾನಡೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಶತಮಾನೋತ್ಸವದ ಸವಿ
ನೆನಪಿಗೆ ಅಶ್ವತ್ಥ ಸಸಿ ನೆಟ್ಟು ನಂತರ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ರೀತಿಯ ಪರಮೋಚ್ಚ ಸ್ಥಾನ ಅಲಂಕರಿಸಬೇಕಾದರೆ ಜ್ಞಾನ ಮತ್ತು ಸತ್ಕರ್ಮ ಎರಡೂ ಅವಶ್ಯಕ ಎಂದು ಅವರು ಹೇಳಿದರು.
ಗೀತೆಯಲ್ಲಿ ಭಗವಂತನು ಕೂಡಾ ಹೇಳಿರುವುದು ಇದನ್ನೇ ಎಂದ ಅವರು, ಕರ್ಮಗಳು ಎರಡು ಬಗೆಯಲ್ಲಿದೆ. ಆದರೆ ಜ್ಞಾನವಂತನು ಸದಾ ಸತ್ಕರ್ಮವನ್ನೇ ಮಾಡುತ್ತಾನೆ. ಅವನಲ್ಲಿ ಸದಾ ಭಕ್ತಿಯ ಭಾವ ಇರುತ್ತದೆ ಎಂದವರು ತಿಳಿಸಿದರು.

Exit mobile version