Home ಅಪರಾಧ ಬೈಕ್ ಸೇತುವೆ ಗೆ ಢಿಕ್ಕಿ: ಸಹ ಸವಾರ ವಿದ್ಯಾರ್ಥಿ ಮೃತ್ಯು

ಬೈಕ್ ಸೇತುವೆ ಗೆ ಢಿಕ್ಕಿ: ಸಹ ಸವಾರ ವಿದ್ಯಾರ್ಥಿ ಮೃತ್ಯು

0


ಉಳ್ಳಾಲ: ಸೇತುವೆಗೆ ಅಳವಡಿಸಿದ ಕಬ್ಬಿಣದ ತಗಡು ಶೀಟ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸಹ ಸವಾರ ವಿದ್ಯಾರ್ಥಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನೇತ್ರಾವತಿ ಸೇತುವೆ ಬಳಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಬಿ.ಸಿ.ರೋಡ್ ಸಮೀಪದ ಲೊರೆಟ್ಟೋ ಪದವು ನಿವಾಸಿ ಸಲ್ಮಾನ್ ಫಾರೀಶ್ (19) ಎಂದು ಗುರುತಿಸಲಾಗಿದೆ. ಸವಾರ ಮೊಹಮ್ಮದ್ ಶಾಕೀರ್ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತಃ ಬಿ.ಸಿ.ರೋಡ್ ನಿವಾಸಿಗಳಾದ ಅವರಿಬ್ಬರು ಕೊಣಾಜೆ ಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಅವರು ಇಂದು ಸಂಜೆ ಕೊಣಾಜೆ ಯಿಂದ ಮಂಗಳೂರಿನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ನೇತ್ರಾವತಿ ಸೇತುವೆ ಬಳಿ ವಾಹನ ಕಬ್ಬಿಣದ ತಗಡು ಶೀಟ್ ಗೆ ಢಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.ಇದರಿಂದ ವಾಹನದಲ್ಲಿ ಇದ್ದ ಇಬ್ಬರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಈ ಪೈಕಿ ‌ಸಲ್ಮಾನ್ ಪಾರೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗೆ ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version