Home ಅಪರಾಧ ಬೆಳಗಾವಿ ಪಾಲಿಕೆ ಹಳೇ ಕಟ್ಟಡಕ್ಕೆ ಬೆಂಕಿ

ಬೆಳಗಾವಿ ಪಾಲಿಕೆ ಹಳೇ ಕಟ್ಟಡಕ್ಕೆ ಬೆಂಕಿ

0

ಬೆಳಗಾವಿ: ಬೆಳಗಾವಿ ನಗರದ ತಹಶೀಲ್ದಾರ್ ಗಲ್ಲಿಯಲ್ಲಿರುವ ತಹಶೀಲ್ದಾರ್ ಕಚೇರಿ ಹಿಂಭಾಗದ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು ಸ್ವಲ್ಪದರಲ್ಲಿ ಭಾರೀ ಅನಾಹುತ ತಪ್ಪಿದಂತಾಗಿದೆ.
ಬೆಳಗಾವಿಯ ಮಹಾನಗರ ಪಾಲಿಕೆಯ ಹಳೇ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು ಭಾರಿ ಅನಾಹುತ ತಪ್ಪಿದಂತಾಗಿದೆ. ಆಕಸ್ಮಿಕವಾಗಿ ತಗುಲಿರುವ ಬೆಂಕಿ ಕೆನ್ನಾಲಿಗೆಗೆ ಪಾಲಿಕೆ ಹಳೇ ಕಟ್ಟಡದಲ್ಲಿ ಇದ್ದ ಸಾಮಗ್ರಿಗಳು ಎಲ್ಲವೂ ಸುಟ್ಟು ಕರಕಲಾಗಿದೆ ಎಂದು ಗೊತ್ತಾಗಿದೆ.
ಬೆಂಕಿ ಅನಾಹುತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದಾರೆ. ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version