Home ಅಪರಾಧ ಬೆಳಗಾವಿ ಕೋರ್ಟ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ

ಬೆಳಗಾವಿ ಕೋರ್ಟ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ

0

ಬೆಳಗಾವಿ: ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಘಟನೆ ನಡೆದಿದೆ.
ಪಾತಕಿ ಜಯೇಶ್ ಪೂಜಾರಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗುತ್ತಿದ್ದಂತೆ ವಕೀಲರು ಮತ್ತು ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿದರು. ಬೆಳಗಾವಿ ನ್ಯಾಯಾಲಯದ ಆವರಣ ಎಂದಿನಂತೆ ಜನಜಂಗುಳಿಯಿಂದ ಕೂಡಿತ್ತು. ನ್ಯಾಯಾಲಯದ ವಿಚಾರಣೆಗೆ ಬಂದಿದ್ದ ವ್ಯಕ್ತಿಯೋರ್ವ ಪಾಕ್ ಪರ ಘೋಷಣೆ ಕೂಗಿದ ಎನ್ನುವ ಆರೋಪದ ಮೇಲೆ ಬೆಳಗಾವಿ ವಕೀಲರು ಯುವಕನನ್ನು ಥಳಿಸಿದ್ದಾರೆ‌. ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸರು ಯುವಕ ನನ್ನು ಕರೆದೊಯ್ದರು. ನಿತೀನ್ ಗಡ್ಕರಿ ಹಾಗೂ ಐಪಿಎಸ್ ಅಧಿಕಾರಿ ಅಲೋಕುಮಾರ್ ಗೆ ಜೀವ ಬೇದರಿಕೆ ಹಾಕಿದ್ದ ಆರೋಪದಲ್ಲಿ ವಿಚಾರಣೆಗೆ ಬಂದಿದ್ದ ಆರೋಪಿ ಜಯೇಶ್ ಪೂಜಾರಿ ಪಾಕ್ ಪರ ಘೋಷಣೆ ಕೂಗಿದ್ದಾನೆ. ಪಾತಕಿ ಜಯೇಶ್ ಪೂಜಾರಿಯನ್ನು ರಕ್ಷಣೆ ಮಾಡಿ ಪೊಲೀಸರು ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋದರು.

ನ್ಯಾಯಾಲಯದ ಆವರಣದಲ್ಲಿ ಪಾಕ ಪರ ಘೋಷಣೆ ಕೂಗಿದ ವಿಚಾರಣಾಧೀನ ಕೈದಿ...

Exit mobile version