Home ತಾಜಾ ಸುದ್ದಿ ಬೀಡಿ-ಸಿಗರೇಟಿಗೆ ಕೈದಿಗಳ ಪ್ರತಿಭಟನೆ

ಬೀಡಿ-ಸಿಗರೇಟಿಗೆ ಕೈದಿಗಳ ಪ್ರತಿಭಟನೆ

0

ಬೆಳಗಾವಿ: ಜೈಲಿನೊಳಗೆ ನಮಗೆ ಬೀಡಿ-ಸಿಗರೇಟು ಸಿಗುವ ತನಕವೂ ಉಪಹಾರ ಸೇವಿಸುವುದಿಲ್ಲ ಎಂದು ಒತಾಯಿಸಿ ಹಿಂಡಲಗಾ ಕೇಂದ್ರ ಕಾರಾಗೃಹದ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ.
ಚಲನಚಿತ್ರ ನಟ ದರ್ಶನ್‌ರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿತ್ತು. ಆ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಲ್ಲಾ ಜೈಲುಗಳಲ್ಲಿಯೂ ಖಡಕ್ ಕಾನೂನು ಪಾಲನೆಯಾಗುತ್ತಿದೆ. ಹಾಗಾಗಿ ನಮಗೆ ಕೂಡಾ ಹಿಂಡಲಗಾ ಜೈಲಿನಲ್ಲಿ ಸಿಗರೇಟು ನೀಡಬೇಕು ಎಂದು ಒತ್ತಾಯಿಸಿ ಕೈದಿಗಳು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.
ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಕೊಡುತ್ತಿದ್ದ ಫೋಟೊಗಳು ವೈರಲ್ ಆಗಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ರಾಜ್ಯದ ಎಲ್ಲ ಜೈಲುಗಳಲ್ಲಿ ಸ್ಟ್ರೀಕ್ಟ್ ರೂಲ್ಸ್ ಜಾರಿಯಾಗಿದೆ. ಬೀಡಿ ಸಿಗರೇಟ್ ಇತರ ವಿಷಯಗಳಿಗೆ ಬ್ರೇಕ್ ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಕೈದಿಗಳು ಹಿಂಡಲಗಾ ಜೈಲಿನಲ್ಲಿ ಬೀಡಿ, ಸಿಗರೇಟ್, ತಂಬಾಕು ನೀಡುವ ತನಕವೂ ಊಟ ಉಪಹಾರ ಮಾಡುವುದಿಲ್ಲ ಎಂದು ಜೈಲಧಿಕಾರಿಗೆ ಸವಾಲು ಹಾಕಿ ಬೆಳಗಿನ ಉಪಾಹಾರ ತಿರಸ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಗೊತ್ತಾಗಿದ್ದು, ಅಧಿಕಾರಿ ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ.

Exit mobile version