Home ತಾಜಾ ಸುದ್ದಿ ಬಿ.ಎಸ್.ಎನ್.ಎಲ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಾಘವೇಂದ್ರ

ಬಿ.ಎಸ್.ಎನ್.ಎಲ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಾಘವೇಂದ್ರ

0

ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿ.ಎಸ್.ಎನ್.ಎಲ್) ಮುಖ್ಯ ಕಚೇರಿಯಲ್ಲಿ ಇಂದು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸಭೆ ನಡೆಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಈ ಕೆಳಕಂಡ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು ಎಂದಿದ್ದಾರೆ.
ಚರ್ಚಿಸಿದ ವಿಷಯಗಳು:

  1. ಇಲ್ಲಿಯವರೆಗೂ ಜಿಲ್ಲೆಯಾದ್ಯಂತ ಟವರ್ ಅಳವಡಿಕೆ ಕಾಮಗಾರಿ ಸಾಗಿರುವ ಹಂತದ ಕುರಿತು.
  2. ಟವರ್ ಅಭಿವೃದ್ಧಿಗೆ ಅಗತ್ಯ ಅನುದಾನ ಹಂಚಿಕೆಯಲ್ಲಿ ಕೊರತೆ ಉಂಟಾಗಿರುವ ಕುರಿತು.
  3. ನೂತನ ಟವರ್ ಅಳವಡಿಕೆಗೆ ಸಾರ್ವಜನಿಕರಿಂದ ಪ್ರಸ್ತಾವನೆ ಬಂದಿರುವ ಕುರಿತು.
  4. ಅರಣ್ಯ ಇಲಾಖೆಯಿಂದ ನೂತನ ಟವರ್ ಅಳವಡಿಕೆಗೆ ತೊಂದರೆ ಉಂಟಾಗಿರುವ ಕುರಿತು.
  5. ಟವರ್ ಅಳವಡಿಕೆಯಾಗಿ ನಂತರ ಅಗತ್ಯ ತಾಂತ್ರಿಕ ಸಲಕರಣೆ ಅಳವಡಿಸುವ ಬಾಕಿ ಕಾಮಗಾರಿಯ ಕುರಿತು..
    ಇನ್ನೂ ಹಲವಾರು ವಿಚಾರಗಳ ಬಗ್ಗೆ ವಿಸ್ತೃತವಾಗಿ ಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಸಲಹೆ ಸೂಚನೆ ಮಾರ್ಗದರ್ಶನ ನೀಡಿ ಶೀಘ್ರವೇ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಲಾಯಿತು ಎಂದಿದ್ದಾರೆ.

Exit mobile version