Home ತಾಜಾ ಸುದ್ದಿ ಬಿಜೆಪಿ ನೀರಿನಿಂದ ಹೊರ ಬಿದ್ದ ಮೀನು

ಬಿಜೆಪಿ ನೀರಿನಿಂದ ಹೊರ ಬಿದ್ದ ಮೀನು

0

ಹುಬ್ಬಳ್ಳಿ: ಬಿಜೆಪಿಯವರಿಗೆ ಅಧಿಕಾರ ಕಳೆದುಕೊಂಡ ಮೇಲೆ ನೀರಿನಿಂದ ಹೊರಗೆ ಬಿದ್ದ ಮೀನಿನಂತಾಗಿದ್ದಾರೆ. ಏನೂ ಸಹಿಸಲು ಆಗುತ್ತಿಲ್ಲ. ಯಾರೇ ಅಧ್ಯಕ್ಷರಾದರೂ, ಪ್ರತಿಪಕ್ಷ ನಾಯಕರಾದರೂ ಅಷ್ಟೇ. ರಿಪೇರಿ ಮಾಡಲಾರದಷ್ಟು ಕೆಟ್ಟು ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಟೀಕಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರೇನೂ ಹರಿಶ್ಚಂದ್ರರಲ್ಲ. ಬಿಜೆಪಿಯವರು ಮೊದಲು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದರು.
ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ. ಪಕ್ಷದ ನಾಯಕರು, ಮುಖ್ಯಮಂತ್ರಿಗಳು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಕರೆದು ಮಾತನಾಡಿಸಿ ಸರಿ ಮಾಡುತ್ತಾರೆ ಎಂದರು.

Exit mobile version