Home ತಾಜಾ ಸುದ್ದಿ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ವಿದ್ಯುತ್ ದುಬಾರಿ

ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ವಿದ್ಯುತ್ ದುಬಾರಿ

0

ನವದೆಹಲಿ: ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ವಿದ್ಯುತ್ ದುಬಾರಿ ಎಂದು ನಿಯೋಜಿತ ದೆಹಲಿ ಸಿಎಂ ಅತಿಶಿ ಹೇಳಿದ್ದಾರೆ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದೆಹಲಿಯಲ್ಲಿ 37 ಲಕ್ಷ ಕುಟುಂಬಗಳ ವಿದ್ಯುತ್ ಬಿಲ್ ಶೂನ್ಯವಾಗಿದೆ. 15 ಲಕ್ಷ ಕುಟುಂಬಗಳಿಗೆ ಅರ್ಧ ದರದಲ್ಲಿ ವಿದ್ಯುತ್ ಸಿಗುತ್ತದೆ. ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಿಗೆ ಹೋಲಿಸಿದರೆ, ದೆಹಲಿಯಲ್ಲಿ ಕಡಿಮೆ ಬೆಲೆಗೆ ವಿದ್ಯುತ್ ಲಭ್ಯವಿದೆ. ದೆಹಲಿಯಲ್ಲಿ 400 ಯೂನಿಟ್ ವಿದ್ಯುತ್ ಬಿಲ್ 980 ರೂ. ಅದೇ ಸಮಯದಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ 2044 ರೂ., ಹರಿಯಾಣದ ಗುರುಗ್ರಾಮ್‌ನಲ್ಲಿ 2300 ರೂ., ಉತ್ತರ ಪ್ರದೇಶದಲ್ಲಿ 2900 ರೂ., ಮಧ್ಯಪ್ರದೇಶದಲ್ಲಿ 3800 ರೂ. ಮತ್ತು ಮಹಾರಾಷ್ಟ್ರದಲ್ಲಿ 4460 ರೂ ಎಂದಿದ್ದಾರೆ.

Exit mobile version